Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವಾಹನ ದಂಡ ಪಾವತಿಸುವ ಲಿಂಕ್ ಕಳುಹಿಸಿ ವಂಚನೆ: ಖಾತೆಯಿಂದ ಒಂದು ಲಕ್ಷ ರೂ. ಕಳವು

ಕಾಸರಗೋಡು: ವಾಹನದ ಡಿಜಿಟಲ್ ದಂಡ ಪಾವತಿಸುವಂತೆ ಲಿಂಕ್ ಕಳುಹಿಸಿ ವಾಹನ ಮಾಲೀಕರೊಬ್ಬರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.

ಚೆಂಗಳ ಸಂತೋಷ್ ನಗರ ನಿವಾಸಿ ಸಿ.ಎ. ಉಸ್ಮಾನ್ ಹಣ ಕಳೆದುಕೊಂಡವರು. ಉಸ್ಮಾನ್ ಅವರ ಮಾಲೀಕತ್ವದ ಬೊಲೆರೊ ವಾಹನಕ್ಕೆ ಡಿಜಿಟಲ್ ದಂಡ ಪಾವತಿಸಲು ಬಾಕಿಯಿದೆ ಎಂದು ತಿಳಿಸಿ ಮೊಬೈಲ್‌ಗೆ ಎಸ್‌ಎಂಎಸ್ ಕಳುಹಿಸಲಾಗಿತ್ತು. ಅದರೊಂದಿಗೆ ಎಂ ಪರಿವಾಹನ್ ಹೆಸರಿನ ಲಿಂಕ್ ಕೂಡ ಕಳುಹಿಸಲಾಗಿತ್ತು.

ಲಿಂಕ್ ಬಂದ ಬೆನ್ನಲ್ಲೇ ಉಸ್ಮಾನ್ ಅವರ ಕಾಸರಗೋಡು ಯೂನಿಯನ್ ಬ್ಯಾಂಕ್ ಖಾತೆಯಿಂದ ಮೊದಲಿಗೆ 99 ಸಾವಿರ ರೂ. ಹಾಗೂ ಬಳಿಕ ಒಂದು ಸಾವಿರ ರೂ. ಸೇರಿದಂತೆ ಒಟ್ಟು ಒಂದು ಲಕ್ಷ ರೂ. ವರ್ಗಾವಣೆಯಾಗಿದೆ. ಈ ಕುರಿತು ಉಸ್ಮಾನ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement