Ticker

6/recent/ticker-posts

Ad Code

ತಂದೆ ಚಲಾಯಿಸಿದ ಪಿಕಪ್ ವ್ಯಾನಿನಡಿಯಲ್ಲಿ ಸಿಲುಕಿ ಗಾಯಗೊಂಡ ಒಂದೂವರೆ ವಯಸ್ಸಿನ ಬಾಲಕಿ ಮೃತ್ಯು


 ತಂದೆ  ಚಲಾಯಿಸಿದ ಪಿಕಪ್ ವ್ಯಾನಿನಡಿಯಲ್ಲಿ ಸಿಲುಕಿ ಗಾಯಗೊಂಡ ಒಂದೂವರೆ ವಯಸ್ಸಿನ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಕೊಟ್ಟಯಂ ಅಯರ್ಕುನ್ನತ್ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ನಿವಾಸಿ ಬಿಬಿನ್ ದಾಸರ ಪುತ್ರಿ ದೇವಪ್ರಿಯ ಮೃತಪಟ್ಟ ಬಾಲಕಿ.

     ನಿನ್ನೆ (ಬುದವಾರ) ಸಂಜೆ ‌ಮನೆಯಂಗಳದಲ್ಲಿ ಈ ಅಫಘಾತ ಉಂಟಾಗಿದೆ. ಬಿಬಿನ್ ದಾಸ್ ಪಿಕಪ್ ವ್ಯಾನ್ ಹಿಂದಕ್ಕೆ ಚಲಾಯಿಸಿದಾಗ ಪಕ್ಕದಲ್ಲಿಯೇ ಇದ್ದ ಮಗು ವಾಹನದ ಹಿಂದಕ್ಕೆ ಹಾರಿದಳು. ವಾಹನ ನಿಲ್ಲಿಸುವ ವೇಳೆ ಬಾಲಕಿ ವಾಹನದ ಅಡಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡಳು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ದೇವಪ್ರಿಯ ಮೃತಪಟ್ಟಳೆಂದು ತಿಳಿದುಬಂದಿದೆ

Post a Comment

0 Comments