Ticker

6/recent/ticker-posts

Ad Code

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಗುಡ್ಡ ಕುಸಿದು ಬಿದ್ದು ಓರ್ವ ಕಾರ್ಮಿಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ


 ಕಾಞಂಗಾಡ್: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಗುಡ್ಡ ಕುಸಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಕಲ್ಕತ್ತಾ ನಿವಾಸಿ‌ ಮುನ್ತಾಜ್‌ ಮಿರ್ (18) ಮೃತಪಟ್ಟ ಕಾರ್ಮಿಕ.   ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಇಂದು (ಸೋಮವಾರ) ಬೆಳಗ್ಗೆ 10.30 ರ ವೇಳೆ ಚೆರ್ವತ್ತೂರು ಬಳಿ ಈ ದುರ್ಘಟನೆ ನಡೆದಿದೆ. 


ಗುಡ್ಡ ಕುಸಿದು ಬಿದ್ದು ಮೂರು ಮಂದಿ ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದರು. ಮಾಹಿತಿ ತಿಳಿದು ಆಗಮಿಸಿದ ಅಗ್ನಿ ಶಾಮಕ ದಳ ಸಿಬಂದಿಗಳು, ಪೊಲೀಸರು ಹಾಗೂ ಊರವರು ಸೇರಿ ಮೂರು ಮಂದಿಯನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ತಲುಪಿಸಿದರು. ಈ ವೇಳೆ ಓರ್ವ ಮೃತಲಟ್ಟಿರುವುದಾಗಿ ತಿಳಿದು ಬಂದಿದೆ

Post a Comment

0 Comments