Ticker

6/recent/ticker-posts

Ad Code

ಸಿಪಿಎಂ ಬ್ರಾಂಚ್ ಕಾರ್ಯದರ್ಶಿಯ‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಮುಳ್ಳೇರಿಯ:  ಸಿಪಿಎಂ ಬ್ರಾಂಚ್ ಕಾರ್ಯದರ್ಶಿಯ ಮೃತದೇಹ ಮನೆಯ ಸನ್ ಶೆಡ್ಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡು ಬಂದಿದೆ‌ ಕಾಡಗಂ ಶಾಂತಿ ನಗರ ನಿವಾಸಿ ಸಿ.ಎಚ್.ಶಶಿ(50) ಆತ್ಮಹತ್ಯೆಗೈದ ವ್ಯಕ್ತಿ. ಮನೆಯಲ್ಲಿ ಒಂಟಿಯಾಗಿ ವಾಸಿಸುವ ಇವರ ಮೃತದೇಹ ನಿನ್ನೆ (ಆದಿತ್ಯವಾರ) ಸಾಯಂಕಾಲ  ಕಂಡು ಬಂದಿದೆ.ಆದೂರು ಪೊಲೀಸರು ಕೇಸು ದಾಖಲಿಸಿದರು. ಚೆನ್ನಂಗೋಡು ರಾಮಣ್ಣರೈ ಗ್ರಂಥಾಲಯಂ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಮನ್- ಲಕ್ಷ್ಮಿ ದಂಪತಿಯ ಪುತ್ರರಾದ ಇವರು ಅವಿವಾಹಿತರಾಗಿದ್ದಾರೆ. ಮೃತರು ತಂದೆ, ತಾಯಿ, ಸಹೋದರ ಸಹೋದರಿಯರಾದ ಗೋಪಾಲನ್, ಕೃಷ್ಣನ್, ಚಂದ್ರನ್, ಶಾಂತ, ಸುನಂದ ಎಂಬಿವರನ್ನು ಅಗಲಿದ್ದಾರೆ

Post a Comment

0 Comments