ಬದಿಯಡ್ಕ:ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ಮೂಲ ನಿವಾಸಿಯಾಗಿದ್ದು ಬದಿಯಡ್ಕ ಮೂಕಂಪಾರೆ ನಿವಾಸಿ ಹಾಗೂ ಕನ್ನೆಪ್ಪಾಡಿ ಬಾಡಿಗೆ ಮನೆಯಲ್ಲಿ ವಾಸಿಸುವ ವೆಂಕಟೇಶ್(60) ಮೃತಪಟ್ಟವರು. ಇವರು ಅಸೌಖ್ಯದಿಂದಾಗಿ ಮಂಗಳೂರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ (ಆದಿತ್ಯವಾರ) ಮನೆಯಲ್ಲಿ ಅವರು ಕೊನೆಯುಸಿರೆಳೆದರು. ಈ ಹಿಂದೆ ಖಾಸಗಿ ಬಸ್ಸಿನಲ್ಲಿಯೂ ಕೆಂಪು ಕಲ್ಲು ಸಾಗಾಟದ ಲಾರಿಯಲ್ಲಿಯೂ ಚಾಲಕರಾಗಿದ್ದರು. ಮೃತರು ಪತ್ನಿ ಕಲಾವತಿ, ಮಕ್ಕಳಾದ ಅರ್ಶಿತ, ಅವಿನಾಶ್, ಅಳಿಯ ಜಯಪ್ರಕಾಶ್, ಸಹೋದರಿಯರಾದ ಬೇಬಿ, ಪುಷ್ಪ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಪುತ್ರಿ ಶೃತಿ ಈ ಹಿಂದೆಯೇ ನಿಧನರಾಗಿದ್ದರು. ಮಂಗಳೂರು ಕೂಳೂರು ಪಂಜಿಮೊಗರು ನಿವಾಸಿಯಾದ ವೆಂಕಟೇಶ್ ವರ್ಷಗಳ ಹಿಂದೆ ಬದಿಯಡ್ಕಕ್ಕೆ ಆಗಮಿಸಿದ್ದರು.
0 Comments