Ticker

6/recent/ticker-posts

9 ವರ್ಷದ ಬಾಲಕಿಗೆ‌ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ 15 ವರ್ಷಗಳ ಕಾಲ ಕಠಿಣ ಸಜೆ ಹಾಗೂ 1 ಲಕ್ಷ ರೂ.ದಂಡ


 ಕಾಸರಗೋಡು: 9 ವರ್ಷದ ಬಾಲಕಿಗೆ‌ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ನ್ಯಾಯಾಲಯವು 15 ವರ್ಷಗಳ ಕಾಲ ಕಠಿಣ ಸಜೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಕಾಸರಗೋಡು ಫೋಕ್ಸೊ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲದ ನ್ಯಾಯಾಧೀಸದ ರಮೇಶ್ ವಂದ್ರಬಾನು ಈ ತೀರ್ಪು ನೀಡಿದ್ದಾರೆ.‌ ದಂಡ ಪಾವತಿಸದಿದ್ದರೆ 9 ತಿಂಗಳು ಅಧಿಕ ಸೆರೆಮನೆ ವಾಸ ಮಾಡಬೇಕಾಗಿದೆ. ಕರಿವೇಡಗಂ‌ ನಿವಾಸಿ  ರಾಜೇಂದ್ರನ್(51) ಎಂಬಾತನಿಗೆ ಶಿಕ್ಷೆ ನೀಡಲಾಗಿದೆ. 2022 ರಲ್ಲಿ ಬೇಡಗಂ ಪೊಲೀಸರು ಈ ಪ್ರಕರಣ ದಾಖಲಿಸಿದ್ದರು. ಅನಂತರ ಎಸ್.ಎಂ.ಎಸ್. ಡಿವೈಎಸ್ಪಿ ಯಾಗಿದ್ದ‌ ಕೆ.ಪಿ.ಸುರೇಶ್ ಬಾನು ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

Post a Comment

0 Comments