Ticker

6/recent/ticker-posts

ನೀರ್ಚಾಲು ಬಳಿಯ ಮಜಿರ್ಪಳ್ಳಕಟ್ಟೆಯಿಂದ ನಾಪತ್ತೆಯಾದ ಯುವತಿ ಅನ್ಯಕೋಮಿನ ಪ್ರಿಯಕರನ ಜತೆ ಪ್ರತ್ಯಕ್ಷ


 ಬದಿಯಡ್ಕ: ನೀರ್ಚಾಲು ಬಳಿಯಿಂದ ನಾಪತ್ತೆಯಾದ ಯುವತಿ ಅನ್ಯ ಕೋಮಿನ ಪ್ರಿಯಕರನ ಜತೆ ಪ್ರತ್ಯಕ್ಷವಾದ ಘಟನೆ ನಡೆದಿದೆ. ಇಲ್ಲಿನ ಮಜಿರ್ಪಳ್ಳ ಕಟ್ಟೆಯ  ಪ್ರತೀಕ್ಷ(19) ನಾಪತ್ತೆಯಾದ ಯುವತಿ. ಈಕೆ ಮೇ.28 ರಂದು ಬೆಳಗ್ಗೆ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟವರು ಅನಂತರ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಮಾವ ಸತೀಶ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸುವ ಮಧೈ ಆಕೆ ಪ್ರಿಯಕರ ಕಾಞಂಗಾಡ್ ನಿವಾಸಿ ಆಸೀಫ್ ಅಲಿ ಜತೆ ಪ್ರತ್ಯಕ್ಷಗೊಂಡಿದ್ದಾಳೆ. ಪ್ರತೀಕ್ಷಾ ಹಾಗೂ ಪ್ರಿಯಕರ ನಿನ್ನೆ (ಬುದವಾರ) ಕಾಸರಗೋಡು ನಗರ ಠಾಣೆಯಲ್ಲಿ ಹಾಜರಾಗಿದ್ದರು. ಈ ಮಾಹಿತಿ ತಿಳಿದ ಬದಿಯಡ್ಕ ಪೊಲೀಸರು ಕಾಸರಗೋಡಿಗೆ ತೆರಳಿ ಯುವತಿಯನ್ನು  ನ್ಯಾಯಾಲಯದಲ್ಲಿ ಹಾಜರಿಪಡಿಸಿದ್ದು ಪ್ರಿಯಕರನ ಜತೆ ತೆರಳುವುದಾಗಿ ನ್ಯಾಯಾಲಯದಲ್ಲಿ ಆಕೆ ಹೇಳಿಕೆ ನೀಡಿದ್ದಾಳೆ.  ನ್ಯಾಯಾಲಯವು ಅದಕ್ಕೆ ಸಮ್ಮತಿ ಸೂಚಿಸಿದೆ. 

Post a Comment

0 Comments