Ticker

6/recent/ticker-posts

ಬದಿಯಡ್ಕ ಬಳಿ ವಿಷ ಸೇವಿಸಿ ಗರ್ಭಿಣಿ ದನ ಸಾವನ್ನಪ್ಪಿದ ಪ್ರಕರಣ; ಪೊಲೀಸ್ ತನಿಖೆ ಆರಂಭ


 ಬದಿಯಡ್ಕ: ಮೂರು ದನಗಳಿಗೆ  ವಿಷವಿಕ್ಕಿ ಅದರಲ್ಲಿ ಗರ್ಭಿಣಿಯಾದ ಒಂದು ದನ‌ ಮೃತಪಟ್ಟ ಘಟನೆ ಬದಿಯಡ್ಕ  ಬಳಿಯ ಬೀಜಂತಡ್ಕದಲ್ಲಿ ನಡೆದಿದೆ. ಬೀಜಂತಡ್ಕ ಪಜಿಲ ನಿವಾಸಿ  ನಫೀಸ ಈ ಬಗ್ಗೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಸರಗೋಡು ಕುಳ್ಳ ತಳಿಯ ಏಳು ತಿಂಗಳ ಗರ್ಭಿಣಿ ದನ ಸಾವನ್ನಪ್ಪಿದೆ. ನಫೀಸರ ದನಗಳಿಗೆ ವಿಷ ಹಾಕಿದವರಾರು ಎಂದು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು 
ತಿಳಿಸಿದ್ದಾರೆ. ಸಾವನ್ನಪ್ಪಿದ ದನ ಮೃತದೇಹದ ಪೋಸ್ಟ್ ಮಾರ್ಟಂ‌ ನಡೆದಿದೆ. ಈ ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Post a Comment

0 Comments