Ticker

6/recent/ticker-posts

ಕೌನ್ಸಿಲಿಂಗ್ ಗೆ ಆಗಮಿಸಿದ ಬಾಲಕಿ ಕಿರುಕುಳ ನೀಡಲು ಯತ್ನಿಸಿದ ಡಾಕ್ಟರ್ ಸೆರೆ


  ಕೌನ್ಸಿಲಿಂಗ್ ಗೆ ತಲುಪಿದ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ ಡಾಕ್ಟರ್ ಸೆರೆಯಾಗಿದ್ದಾರೆ. ಕಾಞಂಗಾಡ್ ಜಿಲ್ಲಾ ಹೋಮಿಯೊ ಸುಪರಿಡೆಂಟ್ ಆಗಿ ನಿವೃತ್ತರಾದ ಸೈಕ್ಯಾಟ್ರಿಸ್ಟ್ ಆಗಿರುವ ಡಾ.ವಿಶಾಖ್ ಕುಮಾರ್(61) ಬಂಧಿತ ಆರೋಪಿ. ತಿರುವನಂತಪುರಂ ವಟ್ಟಿಯೂರ್ ಕಾವ್ ನಿವಾಸಿಯಾದ ಇವರು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ.   

      2023 ಡಿಸಂಬರ್ ತಿಂಗಳಲ್ಲಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನ ನಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯ 14 ವರ್ಷದ ಬಾಲಕಿಯ ಮೇಲೆ ಡಾಕ್ಟರ್ ‌ಕಿರುಕುಳಕ್ಕೆ ಯತ್ನಿಸಿದರೆನ್ನಲಾಗಿದೆ. ಹೆತ್ತವರು  ಬಾಲಕಿಯನ್ನು ಕೌನ್ಸಿಲಿಂಗ್ ಗಾಗಿ ನಾಲ್ಕು ಸಲ ಡಾಕ್ಟರರ ಮನೆಗೆ ಕರೆತಂದಿದ್ದರು. ಮೂರು ಸಲವೂ ಉತ್ತಮ ರೀತಿಯಲ್ಲಿ ಕೌನ್ಸಿಲಿಂಗ್ ನೀಡಲಾಯಿತು. 4 ನೇ ಸಲ ಮಾತ್ರ ಕಿರುಕುಳಕ್ಕೆ ಯತ್ನಿಸಿದ್ದರು.

  ಈ ವರ್ಷ ತರಗತಿ ಆರಂಭವಾದಾಗ  ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆದಿತ್ತು. ಈ ವೇಳೆ ಡಾಕ್ಟರರ ಕಿರುಕುಳ ಯತ್ನ ಬೆಳಕಿಗೆ ಬಂದಿದೆ

ಈ ಬಗ್ಗೆ ಮಾಹಿತಿ ತಿಳಿದ ಚಂದೇರ ಪೊಲೀಸರಯ ಕೇಸು ದಾಖಲಿಸಿದ್ದು ಅನಂತರ ಪ್ರಕರಣವನ್ನು ಹೊಸದುರ್ಗ ಪೊಲೀಸರಿಗೆ ಹಸ್ತಾಂತರಿಸಿದರು. ಹೊಸದುರ್ಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Post a Comment

0 Comments