ಕಣ್ಣೂರು: ಒಂದು ಮನೆಯ ಒಂದೇ ತಾಯಿಯ ಒಂಬತ್ತು ಮಕ್ಕಳು ಈ ವರ್ಷದ ಅಧ್ಯಯನಕ್ಕೆ ಕಾಲಿರಿಸಿ ಮುನ್ನಡೆಯುತ್ತಿರುವುದು ರಾಜ್ಯದ ಶೈಕ್ಷಣಿಕ ಇತಿಹಾಸದ ನವೋಲ್ಲಾಸ ಸೃಷ್ಢಿಗೆ ಕಾರಣವಾದ ದಾಖಲೆಯ ಸಂಗತಿಯಾಗಿದೆ.
ಸಾಧಾರಣವಾಗಿ ಒಂದೋ ಎರಡೋ ಮಕ್ಕಳನ್ನು ಶಾಲೆಗೆ ಸೇರಿಸುವುದು,ಕಲಿಸುವುದು, ಪುಸ್ತಕ,ಬ್ಯಾಗ್ ಕಲಿಕೋಪಕರಣಗಳನ್ನು ಖರೀದಿಸುವಲ್ಲಿಯೇ ಹೈರಾಣವಾಗಿದ್ದೇವೆ ಎಂಬುವವರಿಗೆ ಸ್ಪೂರ್ತಿ ತುಂಬಬಲ್ಲ ಕುಟುಂಬವೊಂದು ಇಲ್ಲಿದೆ.
ತಮ್ಮ ಒಂಬತ್ತು ಮಕ್ಕಳು ಒಟ್ಟಾಗಿ ಈ ವರ್ಷದ ಅಧ್ಯಯನಕ್ಕೆ ಅಣಿಯಾಗಿ ಶಾಲೆಗೆ ಹೊರಡುತ್ತಿರುವ ದೃಶ್ಯ ಕಣ್ಣೂರು ಸಮೀಪದ ಕೊಟ್ಟಿಯೂರಿನ ಸಂತೋಷ್- ರಮ್ಯ ದಂಪತಿಗಳ ಮನಸ್ಸಿಗೆ ಇದೀಗ ಹೊಸ ಪ್ರವೇಶೋತ್ಸವದ ಸಂಭ್ರಮ ಸೃಷ್ಠಿಸಿದ ಸಂಗತಿಯಾಗಿದೆ.
ಸಂತೋಷ್-ರಮ್ಯ ದಂಪತಿಗೆ ಒಟ್ಟು 10 ಮಕ್ಕಳು. ಹಿರಿಯ ಪುತ್ರಿ ಆಲ್ಫಿಯ ಲಿಸ್ಬತ್ ಕೊಟ್ಟಿಯೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ಲಸ್ ಟೂ ಕಲಿಯುತ್ತಿದ್ದಾಳೆ. ಎರಡನೇ ಪುತ್ರಿ ಆಗ್ನಸ್ ಮರಿಯ, ಮೂರನೇ ಮಗಳು ಆನ್ ಕ್ಲೆರಿನ್ ಅದೇ ಶಾಲೆಯಲ್ಲಿ 10, 8 ತರಗತಿಗಳಲ್ಲಿ ಓದುತ್ತಿದ್ದಾರೆ. ಅದರ ನಂತರದ ಅಸಿನ್ ಥೆರೆಸ್ 6 ನೇ ತರಗತಿಯಲ್ಲಿ, ಲಿಯೊ ಟೋಂ 4 ರಲ್ಲಿಯೂ, ಲೆವಿನ್ಸದ ಆಂಟಣಿ 2 ರಲ್ಲಿಯೂ ಕಾಥರಿನ್ ಜೋಕಿಮ ಯು.ಕೆ.ಜಿ.ಯಲ್ಲೂ ಓದುತ್ತಿದ್ದಾರೆ. ಅದರ ನಂತರದ ಅವಳಿ ಮಕ್ಕಳಾದ ಜಿಯೋವನ ಮರಿಯ, ಜಿಯನ್ನ ಜೋಸೆಫ್ ಸಮೀಪದ ಅಂಗವಾಡಿಯಲ್ಲಿ ಸೇರಿದ್ದಾರೆ. ಅನಂತರದ ಮೂರು ತಿಂಗಳ ಪ್ರಾಯದ ಅನ್ನ ರೋಸಲಿನ್ ಮನೆಯಲ್ಲಿ ತಾಯಿಯ ಕೈಗೂಸು ಆಗಿ ಉಳಿದಿದ್ದಾಳೆ.
ಹತ್ತು ಮಕ್ಕಳು ಕಳೆದ ರಜಾವಧಿಯಲ್ಲಿ ಒಟ್ಟಾಗಿ ಒಂದೇ ಮನೆ ಪರಿಸರದಲ್ಲಿ ಆಟವಾಡಿಕೊಂಡಿದ್ದು ಇದರಲ್ಲಿ ಒಂಭತ್ತು ಮಕ್ಕಳು ಈ ವರ್ಷದ ಪ್ರವೇಶೋತ್ಸವದ ಸಂದರ್ಭ ಶಾಲೆಯೆಡೆಗೆ ನಡಿಗೆ ಬೆಳೆಸಿರುವುದರಿಂದ ಮನೆಯಲ್ಲಿರುವ ಸಣ್ಣ ಕೂಸಿಗೆ ಆಟವಾಡಲು ಜನ ಇಲ್ಲದೆ ಅಮ್ಮನ ಮಡಿಲಲ್ಲಿ ಕುಳಿತುಕೊಂಡು ಅಕ್ಕ ಅಣ್ಣರನ್ನು ಕಾದು ಕುಳಿತುಕೊಳ್ಳಬೇಕಾಗಿದ ಎ. ಈ ವರ್ಷ ಮಾತ್ರ ಈ ರೀತಿಯ ಪರಿಪಾಠವಾಗಿದೆ. ಮುಂದೆ ಹಿರಿಯ ಮಗಳು ಈ ವರ್ಷ ಪ್ಲಸ್ ಟು. ಉತ್ತೀರ್ಣಳಾದರೆ ಈ ಕುಟುಂಬದ ಶೈಕ್ಷಣಿಕ ಮುನ್ನಡೆಗೆ ಮತ್ತೊಂದು ನಾಂದಿಯಾಗಲಿದೆ.
0 Comments