Ticker

6/recent/ticker-posts

ಭಾರತ್ ಬೆನ್ಸ್ ಗೂಡ್ಸ್ ಕಾರಿಯರ್ ವ್ಯಾನಿನಲ್ಲಿ ಸಾಗಿಸುತ್ತಿದ್ದ 28.25 ಲೀಟರ್ ಪಾಂಡಿಚೇರಿ ನಿರ್ಮಿತ ವಿದೇಶ ಮದ್ಯ ವಶ, ಇಬ್ಬರ ಸೆರೆ


 ಕಾಸರಗೋಡು: ಭಾರತ್ ಬೆನ್ಸ್ ಗೂಡ್ಸ್ ಕಾರಿಯರ್ ವ್ಯಾನಿನಲ್ಲಿ ಸಾಗಿಸುತ್ತಿದ್ದ 28.25 ಲೀಟರ್ ಪಾಂಡಿಚೇರಿಯಲ್ಲಿ ಮಾತ್ರ ಮಾರಾಟ ಮಾಡುವ ವಿದೇಶ ಮದ್ಯವನ್ನು ಹೊಸದುರ್ಗ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 



ಇದಕ್ಕೆ ಸಂಬಂದಪಟ್ಟಂತೆ  ಇಬ್ಬರನ್ನು ಬಂಧಿಸಲಾಗಿದೆ. ಕೊಲ್ಲಂ ಪರವೂರು ನಿವಾಸಿ ಲಿಜಿನ್ ಎಲ್(30), ಕೊಲ್ಲಂ ನೆಡುಂಬನ ನಿವಾಸಿ ಅಖಿಲ್ ಎಂಬಿವರನ್ನು ಬಂಧಿಸಲಾಗಿದೆ. 


ಹೊಸದುರ್ಗ ಅಬಕಾರಿ ಇನ್ಸ್ಪೆಕ್ಟರ್ ಜಿಷ್ಣುಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ  ಇತರರಾದ ಸಂತೋಷ್ ಕುಮಾರ್, ಅನೀಶ್.ಕೆ.ವಿ,  ಮುಹಮ್ಮದ್ ಜುನೈದ್, ಅಜೂಬ್ ವಿ.ಎ.ಮೊದಲಾದವರು ಭಾಗವಹಿಸಿದರು. ಕಾಞಂಗಾಡ್ ಮಾವುಂಗಾಲ್ ನಲ್ಲಿ ಈ ಕಾರ್ಯಾಚರಣೆ ನಡೆದಿದೆ

Post a Comment

0 Comments