Ticker

6/recent/ticker-posts

Ad Code

ಬೆದ್ರಂಪಳ್ಳದ ಮಹಿಳೆ ಮಕ್ಕಳು ನಾಪತ್ತೆ ಪ್ರಕರಣ ಸುಖಾಂತ್ಯ

 


ಪೆರ್ಲ :  ಇಬ್ಬರು ಮಕ್ಕಳ ಸಹಿತ ಮಹಿಳೆಯೋರ್ವೆ ನಾಪತ್ತೆಯಾದ ಪ್ರಕರಣ ಸುಖಾಂತ್ಯ ಕಂಡಿದೆ. ಕಳೆದ ತಿಂಗಳು ಮೇ 31ರಿಂದ ತನ್ನ ಪತ್ನಿ ಚಿತ್ರಕಲಾ   (37) ಹಾಗೂ ಹನ್ನೊಂದು ಮತ್ತು ಮೂರು ವರ್ಷ ಪ್ರಾಯದ ಮಕ್ಕಳು ನಾಪತ್ತೆಯಾಗಿರುವುದಾಗಿ ಬೆದ್ರಂಪಳ್ಳ ಪಾಟ್ಲದಳ ನಿವಾಸಿ ಗಂಗಾಧರ ನಾಯ್ಕ  ಬದಿಯಡ್ಕ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕಾರ್ಯಚರಣೆ ನಿರತರಾದ ಪೋಲಿಸರು ನೆರೆಯ ಕರ್ನಾಟಕದಿಂದ ಇವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೂ.3 ರಂದು ಇವರನ್ನು ಕಾಸರಗೋಡು ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದು ಮನೆಯ ಸಮಸ್ಯೆ ತಾಳಲಾಗದೆ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಮಹಿಳೆ ತಿಳಿಸಿದ್ದಳು. ಮಹಿಳೆಗೆ ಸ್ವ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳಲು ಕೋರ್ಟು ನಿರ್ದೇಶಿಸಿದ್ದು ಮಹಿಳೆ ಮನೆಯವರೊಂದಿಗೆ ತೆರಳಲು ಸಮ್ಮತಿ ಸೂಚಿಸಿದ್ದಳು.ಇದೀಗ ಪ್ರಕರಣ ಸುಖಾಂತ್ಯ ಕಂಡಿರುವುದಾಗಿ ಬದಿಯಡ್ಕ ಪೋಲಿಸರು ತಿಳಿಸಿದ್ದಾರೆ.

Post a Comment

0 Comments