Ticker

6/recent/ticker-posts

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಜುಲೈ 26 ಶನಿವಾರದಂದು

 


ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ  ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವು ಜುಲೈ 26 ಶನಿವಾರ ಜರಗಲಿರುವುದು. ಅಂದು  ಬೆಳಗ್ಗೆ 10 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರುವ ದೀಪ ಬೆಳಗಿಸುವರು. ಅನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸುವರು. ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾನೀಜಿ ಆಶೀರ್ವಚನ ಮಾಡುವರು. ಸುವರ್ಣ ಟಿ.ವಿ.ಸಂಪಾದಕ ಶ್ರೀ ಸಜಿತ್ ಹನುಮಕ್ಕನವರ್ ಮುಖ್ಯ ಭಾಷಣ ಮಾಡುವರು‌. ಕಾರ್ಗಿಲ್ ಯುದ್ದ ವೀರ  ಹವಲ್ದಾರ್ ಜಾನಿ ಮಾಥ್ಯು ರಾಜಪುರಂ ಉಪಸ್ಥಿತರಿರುವರು‌. ಬ್ರಿಗೇಡಿಯರ್  ಐ.ಎನ್.ರೈ ಕುಂಬಳೆ, ಕಮಾಂಡರ್ ಕೆ.ವಿಜಯಕುಮಾರ್ ಕಣ್ವತೀರ್ಥ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಂಗಳೂರು, ಸುಕೇಶ್ ಹೆಗ್ಗಡೆ ಬೆಂಗಳೂರು ಎಂಬಿವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸದ್ಗುರು ಶ್ರೀ ನಿತ್ಯಾನಂದ ವಿದ್ಯಾ ಪೀಠದ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಇರುವುದು

Post a Comment

0 Comments