ಪೆರ್ಲ: ಮಾಜಿ ಮುಖ್ಯಮಂತ್ರಿ ಉಮ್ಮಾನ್ ಚಾಂಡಿ ಅವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದಂಗವಾಗಿ ಎಣ್ಮಕಜೆ ಮಂಡಲ ಕಾಂಗ್ರೆಸ್ ವತಿಯಿಂದ ಪೆರ್ಲದಲ್ಲಿರುವ ಕುಟುಂಬ ಆರೋಗ್ಯ ಕೇಂದ್ರದ ಪಾಲಿಟೀವ್ ಕೇರ್ ರೋಗಿಗಳಿಗೆ ಅಗತ್ಯದ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.
ಅದೇಷ್ಟೊ ಆಶಕ್ತರಿಗೆ ಬಡವರಿಗೆ ಕರುಣಾಳುವಾಗಿದ್ದ ಉಮ್ಮಾನ್ ಚಾಂಡಿಯವರ ಜೀವನ ಆದರ್ಶ ಮೌಲ್ಯಗಳನ್ನು ಕಾಯ್ದುಕೊಂಡು ಪಕ್ಷ ಸಿದ್ಧಾಂತಗಳಿಗೆ ಬದ್ಧವಾದ ನಾಯಕನೊಬ್ಬನ ನಿತ್ಯ ಸ್ಮರಣೆಗಾಗಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ತಿಳಿಸಿದರು. ಈ ಸಂದರ್ಭ ಆರೋಗ್ಯ ಕೇಂದ್ರದ ಡಾ. ಲಕ್ಷ್ಮಿ ಪ್ರಿಯಾ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಮಾಜಿ ಮಂಡಲಾಧ್ಯಕ್ಷ ಅಮು ಅಡ್ಕಸ್ಥಳ, ಕಾಂಗ್ರೆಸ್ ನೇತಾರರಾದ ವಿಲ್ಫ್ರೆಡ್ ಡಿಸೋಜ, ರಸಾಕ್ ನಲ್ಕ,ಮಾಯಿಲ ನಾಯ್ಕ್,ಅಬ್ದುಲ್ ರಸಾಕ್ ನೂರ, ಎಸ್.ಯು.ಅಬ್ದುಲ್ಲ ಶೇಣಿ,ಬಾಲಕೃಷ್ಣ ಕುಲಾಲ್ ಮೊದಲಾದವರು ಭಾಗವಹಿಸಿದ್ದರು.
0 Comments