ಮಂಜೇಶ್ವರ: ಇಲ್ಲಿನ ಕುಂಜತ್ತೂರಿನಲ್ಲಿ ಲಾರಿ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತಪಟ್ಟವರು ರಾಷ್ಟ್ರೀಯ ಹೆದ್ದಾರಿ ಕಾರ್ಮಿಕರೆಂದು ತಿಳಿದು ಬಂದಿದೆ.ಬಿಹಾರ ನಿವಾಸಿ ರಾಜಕುಮಾರ್ ಮಾಥುರ್(25), ರಾಜಸ್ಥಾನ ನಿವಾಸಿ ದಾನೂರ್ ಅಮಿತ್ ಗಣಪತಿ ಬಾಯ್(28) ಮೃತಪಟ್ಟವರು. ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು ಇವರನ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣ್ಣರಕ್ಕಾಡ್ ನಿಂದ ಮಂಗಳೂರು ಕಡೆಗೆ ಸಾಗುವ ಲಾರಿ ಡಿಕ್ಕಿ ಹೊಡೆದಿದೆ
0 Comments