ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಸ್ಥಾಪಕ ದಿ.ಬಿ.ಯಂ.ಈಶ್ವರ ಮಾಸ್ಟರ್ ಮಂಜೇಶ್ವರ ಅವರ ಸ್ಮರಣಾರ್ಥ ನೀಡಲಾಗುವ " ಪ್ರತಿಭಾ ಪುರಸ್ಕಾರ 2024 - 2025 " ವಿತರಣಾ ಕಾರ್ಯಕ್ರಮ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ನಡೆಯಿತು.
ಕು.ಧನ್ಯಶ್ರೀ .ಎನ್.ಎಸ್ (ಪ್ಲಸ್ ಟು), ಕು.ಧನ್ಯಶ್ರೀ . ಜೆ.ಎಂ (ಪದವಿ), ನಿಧೀಶ್ ಗಾಡಿಗುಡ್ಡೆ (ಪದವಿ), ಕು.ಸಿಜಕುಮಾರಿ(ಪದವಿ) ಪುರಸ್ಕಾರ ಪಡಕೊಂಡರು.
ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಇಂಜಿನಿಯರ್ ಪದ್ಮನಾಭ ಚೇನೆಕೋಡು , ಬದಿಯಡ್ಕ ಗ್ರಾಮ ಪಂಚಾಯತಿನ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ , ಅತಿಥಿಗಳಾಗಿದ್ದರು. ಜಾನಪದ ಕಲಾವಿದ ಶಂಕರ್ ಸ್ವಾಮಿಕೃಪಾ , ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಮಾಜಿ ಅಧ್ಯಕ್ಷ ಹರೀಶ್ಚಂದ್ರ ಪುತ್ತಿಗೆ , ನಿವೃತ್ತ ಗ್ರಾಮಾಧಿಕಾರಿ ಕೃಷ್ಣ .ಡಿ ದರ್ಬೆತ್ತಡ್ಕ , ಸುನಂದ ಟೀಚರ್ ಕುಂಬ್ಳೆ , ಆಶಾಕಿರಣ್ ಟೀಚರ್ ದರ್ಬೆತ್ತಡ್ಕ , ವಿಜಯ ಕುಮಾರ್ ಬಾರಡ್ಕ, ಪದ್ಮಾವತಿ ಏದಾರ್ , ವಸಂತ ಬಾರಡ್ಕ ಶುಭಾಶಂಶನೆಗೈದರು. ಸುಂದರ ಬಾರಡ್ಕ ಸ್ವಾಗತಿಸಿ , ರಾಮ ಪಟ್ಟಾಜೆ ವಂದಿಸಿದರು.
0 Comments