Ticker

6/recent/ticker-posts

ಕುಂಬಳೆ ಜಿಎಸ್ ಬಿಎಸ್ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

 


ಕುಂಬಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮಂಜೇಶ್ವರ ತಾಲೂಕಿನ ಕುಂಬ್ಳೆ ವಲಯದ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ GSBS ಕುಂಬ್ಳೆ ಸರಕಾರಿ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪೊಲೀಸ್ ಅಧಿಕಾರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ವಿಜಯ್ ಕುಮಾರ್,ಜನಜಾಗೃತಿ ವೇದಿಗೆ ವಲಯ ಅಧ್ಯಕ್ಷರು ಮಹೇಶ್ ಪುಣಿಯೂರು, ಸದಸ್ಯರು ವಿದ್ಯಾ ಪೈ ಮೇಡಂ, ಮೇಲ್ವಿಚಾರಕರು, ಸೇವಾಪ್ರತಿನಿಧಿ, ಅಧ್ಯಾಪಕರು, ಮಕ್ಕಳು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಮಾದಕ ವಸ್ತುಗಳಿಗೆ, ಅಮಲು ಪದಾರ್ಥ ಇತರೆ ದುಶ್ಚಟಕ್ಕೆ ಬಲಿಯಾಗದೆ ಆರೋಗ್ಯವಂತರಾಗಿ ದೇಶಕ್ಕೆ ಉತ್ತಮ ಪ್ರಜೆಗಳಾಗಿ ಹೆತ್ತವರ ಕನಸನ್ನು ನನಸು ಮಾಡುವ ಹೊಣೆಗಾರಿಕೆ ಮಕ್ಕಳಿಗೆ ಇದೆ ಎಂದು ಪೊಲೀಸ್ ಅಧಿಕಾರಿ ಶರತ್ ಬಾಬು ಮಾಹಿತಿ ನೀಡಿದರು.

Post a Comment

0 Comments