Ticker

6/recent/ticker-posts

ಕಾಟುಕುಕ್ಕೆ ಶಾಲಾ ನಿವೃತ್ತ ಶಿಕ್ಷಕ ಕೃಷ್ಣನ್ ನಂಬೂದಿರಿ ಹೃದಯಾಘಾತದಿಂದ ನಿಧನ

 


ಪೆರ್ಲ : ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ನಿವೃತ್ತ ಶಿಕ್ಷಕ ಕೃಷ್ಣನ್ ನಂಬೂದಿರಿ (58) ಹೃದಯಾಘಾತದಿಂದ ಆದಿತ್ಯವಾರ ರಾತ್ರಿ ನಿಧನರಾದರು. ಮೂಲತಃ ನೀಲೇಶ್ವರವರಾದ ಇವರು 1998ರಲ್ಲಿ ಹೈಸ್ಕೂಲ್ ವಿಭಾಗದ ಶಿಕ್ಷಕ ವೃತ್ತಿಗೆ ಪ್ರವೇಶಿಸಿದ್ದು ಬಳಿಕ ಹೈಯರ್ ಸೆಕೆಂಡರಿ ಉಪನ್ಯಾಸಕರಾಗಿ ಭಡ್ತಿ ಹೊಂದಿ ಸೇವೆಗೈದು ನಿವೃತ್ತರಾಗಿದ್ದಾರೆ. ಮೃತರು ಪತ್ನಿ ಜ್ಯೋತಿ ಕೆ.ಸಿ ಹಾಗೂ ಒರ್ವ ಪುತ್ರ ಅಭಿನವ್ , ಪುತ್ರಿಯರಾದ ಆಖಿಲಾ,ಅತುಲ್ಯ,ಅಳಿಯ ರಾಹುಲ್ ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ.ಇವರ ನಿಧನಕ್ಕೆ ಶಾಲಾ ಆಡಳಿತ ಮಂಡಳಿಯು ಸಂತಾಪ ವ್ಯಕ್ತಪಡಿಸಿದ್ಧಾರೆ.

Post a Comment

0 Comments