ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಯುವಕವೃಂದದ ನೇತೃತ್ವದಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಗ್ರಹ ರಚನೆಗೆ ಚಾಲನೆ ನೀಡಲಾಯಿತು. ಉಳಿಯತ್ತಡ್ಕದಲ್ಲಿ ಪುರೋಹಿತ ರತ್ನ ವೇದಮೂರ್ತಿ ಕೇಶವ ಆಚಾರ್ಯ ಇವರು ಪೂಜಾ ಕೈಂಕರ್ಯವನ್ನು ನೆರವೇರಿಸಿ ಶ್ರೀ ದೇವರಲ್ಲಿ ಪ್ರಾರ್ಥಿಸಿ ಗಣೇಶೋತ್ಸವಕ್ಕಿರುವ ಗಣಪತಿಯ ವಿಗ್ರಹ ರಚನೆಗೆ ಆರಂಭಗೈದರು. ಈ ಸಂದರ್ಭದಲ್ಲಿ ಕಾರ್ಮಾರು ಮಹಾವಿಷ್ಣು ಕ್ಷೇತ್ರದ ಆಡಳಿತ ಮುಕ್ತೇಸರರಾದ ರಾಧಾಕೃಷ್ಣ ರೈ , ಸುಂದರ ಶೆಟ್ಟಿ ಕೊಲ್ಲಂಗಾನ, ಮಹೇಶ್ ವಳಕುಂಜ, ಗೋಕುಲ ಶರ್ಮ ಕಾರ್ಮಾರು, ಪುರುಷೋತ್ತಮ ಕಾರ್ಮಾರು ಮೊದಲಾದವರು ಉಪಸ್ಥಿತರಿದ್ದರು.
0 Comments