ನೀರ್ಚಾಲು: ಟೆಂಪೊ ಲಾರಿ ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಇಬ್ಬರು ಗಭೀರ ಗಾಯಗೊಂಡಿದ್ದಾರೆ
ಮಾನ್ಯ ನಿವಾಸಿ ಪಕ್ಕು ಯಾನೆ ಪ್ರಕಾಶ(36), ನೀರ್ಚಾಲಿನ ಬಾಡಿಗೆ ಕ್ಬಾಟರ್ಸ್ ನಲ್ಲಿ ವಾಸಿಸುವ ರತೀಶ್(32) ಗಾಯಗೊಂಡವರು. ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ (ಬುದವಾರ) ಸಾಯಂಕಾಲ 5 ಗಂಟೆಯ ವೇಳೆ ದರ್ಬೆತ್ತಡ್ಕ ಪೆಟ್ರೋಲ್ ಪಂಪ್ ಪರಿಸರದಲ್ಲಿ ಈ ಘಟನೆ ನಡೆದಿದೆ. ಬೇಳ ಭಾಗದಿಂದ ಕೆಂಪು ಕಲ್ಲು ಹೇರಿ ಬರುತ್ತಿದ್ದ ಟೆಂಪೊ ಲಾರಿ ಸೀತಾಂಗೋಳಿಯಿಂದ ನೀರ್ಚಾಲಿಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
0 Comments