Ticker

6/recent/ticker-posts

ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ತೆರಳಿದ ಚಾಲಕ ಮರದ ರೆಂಬೆ ಮುರಿದು ಬಿದ್ದು ಮೃತ್ಯು


 ಪೆರ್ಲ: ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಮರದಡಿಗೆ ತೆರಳಿದ ಚಾಲಕ ಮರದ ರೆಂಬೆ ಮುರಿದು ಬಿದ್ದು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ದ. ಕ. ಜಿಲ್ಲೆಯ ಬಂಟ್ವಾಳ ಪೆರಾಜೆ ಬಳಿಯ ಕುಡೇಲು ನಿವಾಸಿ ಕಾಂತಪ್ಪ ಗೌಡ - ಗೀತಮ್ಮ ದಂಪತಿ ಯ ಪುತ್ರ ಕೆ. ಜಗದೀಶ ಗೌಡ (50) ಮೃತ ವ್ಯಕ್ತಿಯಾಗಿದ್ದಾರೆ. 

ಬುಧವಾರ ಮುಂಜಾನೆ ಆರೂಕಾಲರ ವೇಳೆಗೆ ಪೆರ್ಲ- ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಈ ಘಟನೆ ನಡೆಯಿತು. ಮೂಡಬಿದಿರೆಯಿಂದ ಕಾಸರಗೋಡಿಗೆ ಪಶು ಆಹಾರ ಸಾಗಿಸುತ್ತಿದ್ದ ಲಾರಿಯಲ್ಲಿ ಜಗದೀಶ ಚಾಲಕನಾಗಿದ್ದರು. ವಿಟ್ಲ ದಾರಿಯಾಗಿ ಸೀತಾಂಗೋಳಿ ಮೂಲಕ ಕಾಸರಗೋಡಿಗೆ ಲೋಡ್ ಸಾಗಿಸುತ್ತಿದ್ದರು. ಬೆದ್ರಂಪಳ್ಳ ಬಳಿಯ ನಿರ್ಜನ ಪ್ರದೇಶದಲ್ಲಿ ಲಾರಿ ನಿಲ್ಲಿಸಿ ಮರದಡಿಯೊಂದರಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಮರದ ರೆಂಬೆ ಮುರಿದು ದೇಹಕ್ಕೆ ಬಿದ್ದು ಮರಣ ಸಂಭವಿಸಿತು. ಲಾರಿಯಲ್ಲಿ ಜತೆಗಿದ್ದ ಕ್ಲೀನರ್ ಮೊದಲಿಗೆ ವಿಷಯ ಅರಿತಿದ್ದು, ಬಳಿಕ ದಾರಿ ಹೋಕರ ಸಹಾಯ ಪಡೆದು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಅಪಾಯದಿಂದ ಪಾರಾಗಿಸಲು ಆಗಲಿಲ್ಲ. ಬದಿಯಡ್ಕ ಪೋಲೀಸರು ಅಸಹಜ ಮರಣಕ್ಕೆ ಕೇಸು ದಾಖಲಿಸಿದ್ದಾರೆ. ಕಾಸರಗೋಡಿನಲ್ಲಿ ಪೊಸ್ಟ್ ಮಾರ್ಟಂ ಬಳಿಕ ಮೃತದೇಹ ಅವರ ಊರಿಗೆ ಕೊಂಡೊಯ್ಯಲಾಯೀತು. ಮೃತರು ಪತ್ನಿ ಪ್ರೇಮ, ಮೂವರು ಮಕ್ಕಳನ್ನಗಲಿದ್ದಾರೆ.

Post a Comment

0 Comments