ಕಾಸರಗೋಡು : ಪ್ರಸಿದ್ದ ರಾಣಿಪುರಂ ಪ್ರವಾಸಿ ತಾಣದಿಂದ ಹಿಂತಿರುಗುತ್ತಿದ್ದ ಕಾರೊಂದು ಪಾಣತ್ತೂರು ಬಳಿಯ ಕುಂದುಪಲ್ಲ-ಮಾಪಿಲಾಚೇರಿ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಕಾರಿನಲ್ಲಿ ಐದು ಜನರಿದ್ದು ಪುತ್ತೂರಿನಿಂದ ರಾಣಿಪುರಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಅವರಲ್ಲಿ ಮೂವರು ಗಾಯಗೊಂಡಿದ್ದಾರೆ. ಆಟೋ-ಟ್ಯಾಕ್ಸಿ ಕಾರ್ಮಿಕರು ಮತ್ತು ಸ್ಥಳೀಯರು ಗಾಯಾಳುಗಳನ್ನು ಪಾಣತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ರಾಣಿಪುರಂನಿಂದ ಪಾಣತ್ತೂರುವರೆಗಿನ 5 ಕಿ.ಮೀ ರಸ್ತೆಯು ಕಡಿದಾದ ಇಳಿಜಾರುಗಳನ್ನು ಹೊಂದಿದೆ. ಆದರೆ ಈ ರಸ್ತೆಯಲ್ಲಿ ಇದನ್ನು ಸೂಚಿಸುವ ಯಾವುದೇ ಸೂಚನಾ ಫಲಕಗಳಿಲ್ಲ. ಇದರಿಂದಾಗಿ ಈ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತವೆ ಎಂದು ಸ್ಥಳೀಯರು ದೂರಿದ್ದಾರೆ.

0 Comments