ಕಾಸರಗೋಡು: ಕ್ರೈಸ್ಟ್ ಕ್ಲಬ್ ಕಯ್ಯಾರ್ ಇದರ ಆಶ್ರಯದಲ್ಲಿ ಸಂತ ಜೋಸೆಫ್ ವಾಳೆ, ಪವಿತ್ರ ಹೃದಯ ವಾಳೆ ಹಾಗೂ ವೇಲಂಕಣಿ ಮಾತೆ ವಾಳೆ ಸಹಭಾಗಿತ್ವದಲ್ಲಿ ಕ್ರಿಸ್ಮಸ್ ಸಂಜೆ ಕಾರ್ಯಕ್ರಮ ರವಿವಾರ ಕಯ್ಯಾರ್ ಜಂಕ್ಷನ್ ನಲ್ಲಿ ನಡೆಯಿತು. ಕಯ್ಯಾರು ಕ್ರಿಸ್ತ ರಾಜ ಚರ್ಚ್ ನ ಧರ್ಮಗುರು ಫಾದರ್ ವಿಶಾಲ್ ಮೋನಿಸ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸೋಮಶೇಖರ ಜೆ. ಎಸ್, ಇರ್ಫಾನ ಇಕ್ಬಾಲ್, ಪ್ರಾದೇಶಿಕ ಸಾರಿಗೆ ಇಲಾಖೆ ಸಹಾಯಕ ಅಧಿಕಾರಿ ಮನೀಶ್ ಶೆಟ್ಟಿ, ಪೈವಳಿಕೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅವಿನಾಶ್ ಮಚಾದೊ, ಸದಸ್ಯೆ ಪ್ರಿನ್ಸಿ ಮರಿಯ ಡಿ ಸೋಜ, ಕಯ್ಯಾರ್ ವಿಜಯ್ ಜೇಸುರಾಜ್ ಕಾನ್ವೆಂಟಿನ ಸಿಸ್ಟರ್ ಅವ್ರೆಲಿಯಾ ಡಿ ಸೋಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ ಸೋಜ, ವಾಳೆಯ ಗುರಿಕ್ಕಾರರಾದ ಜೋರ್ಜ್ ಡಿ ಆಲ್ಮೇಡಾ, ಡೆನಿಸ್ ಮೊಂತೋರೊ, ಸೆಲಿನಾ ಮಚಾದೊ ಮೊದಲಾದವರು ಉಪಸ್ಥಿತರಿದ್ದರು. ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಾಯಕ ಅಧಿಕಾರಿ ಮನೀಶ್ ಶೆಟ್ಟಿ, ಪೈವಳಿಕೆ ಪಂಚಾಯತ್ ಸದಸ್ಯೆ ಪ್ರಿನ್ಸಿ ಮರಿಯ ಡಿ ಸೋಜ ಹಾಗೂ ಮಾಜಿ ಸದಸ್ಯ ಅವಿನಾಶ್ ಮಚಾದೊರವರನ್ನು ಸನ್ಮಾನಿಸಲಾಯಿತು. ಕ್ರೈಸ್ಟ್ ಕ್ಲಬ್ ಅಧ್ಯಕ್ಷ ಜೋಯ್ ವಿನ್ಸೆಂಟ್ ಡಿಸೋಜ ಸ್ವಾಗತಿಸಿ, ಕಿರಣ್ ಮಚಾದೊ ವಂದಿಸಿದರು. ವಿನ್ಸೆಂಟ್ ಡಿ ಸೋಜ ಹಾಗೂ ನಿಸ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಾಸ್ಯ, ಹಾಡು, ನೃತ್ಯ, ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.

0 Comments