ಕಾಸರಗೋಡು: ಗೂಡ್ಸ್ ಲಾರಿಯಲ್ಲಿ ತರಕಾರಿ ಸಾಗಾಟದ ಮರೆಯಲ್ಲಿ ಅಕ್ರಮವಾಗಿ ಕರ್ನಾಟಕದಿಂದ ಗೋವುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಇಬ್ಬರನ್ನು ವಿರಾಜಪೇಟೆ ಪೋಲಿಸರು ಬಂಧಿಸಿದ್ದಾರೆ. ಕಣ್ಣೂರು ಸಮೀಪದ ತಳಿಪರಂಬ ನಿವಾಸಿ ಪಿ.ಪಿ.ಸಾಧಿಕ್ (38) ಮತ್ತು ಅಬ್ದುಲ್ ಅಹಮ್ಮದ್ ತಂಙಳ್ (34)ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ತಳಿಪರಂಬದಿಂದ ಬಂದು ಪಿರಿಯಪಟ್ಟಣ ತಾಲೂಕಿನ ವಿವಿಧೆಡೆ ದನ ಕರುಗಳನ್ನು ಖರೀದಿಸಿ ನಡುರಾತ್ರಿ ಸಾಗಿಸುತ್ತಿದ್ದರು. ಟೆಂಪೊದಲ್ಲಿ ಗೋವುಗಳನ್ನು ತುಂಬಿಸಿ ಅನುಮಾನ ಬರದಂತೆ ಆಲೂಗಡ್ಡೆ ಮೂಟೆಗಳನ್ನು ತುಂಬಿಸಿಟ್ಟಿದ್ದರು. ಗೋವುಗಳನ್ನು ತುಂಬಿಸಿದ್ದ ಲಾರಿ ಹೊರಡುತ್ತಿದ್ದ ವಿಷಯ ತಿಳಿದ ಗೋರಕ್ಷಕರು ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ಕಾಯುತ್ತಿದ್ದರು. ಮುಂಜಾನೆ ಲಾರಿ ತಪಾಸಣೆ ಕೇಂದ್ರದ ಬಳಿ ಬರುತ್ತಿದ್ದಂತೆ ಲಾರಿಯನ್ನು ಹಿಡಿದಿಟ್ಟು ಪರಿಶೀಲಿಸಿದ್ದಾರೆ. ಈ ವೇಳೆ 10ಕ್ಕು ಹೆಚ್ಚು ಗೋವುಗಳು ಪತ್ತೆಯಾಗಿವೆ. ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

0 Comments