ಬದಿಯಡ್ಕ : ತ್ರಿಸ್ತರ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ ಗೋಳಿಯಡ್ಕದಲ್ಲಿ ನಡೆಯಿತು. ಗ್ರಾ.ಪಂ.ನ 14ನೇ ವಾರ್ಡು ಕನ್ಯಪಾಡಿಯಿಂದ ಸ್ಪರ್ಧಿಸಿ ವಿಜೇತರಾದ ಗಂಗಾಧರ ಗೋಳಿಯಡ್ಕ ಹಾಗೂ ಕಾಸರಗೋಡು ಬ್ಲೋಕು ಪಂಚಾಯತು ಬದಿಯಡ್ಕ ಡಿವಿಷನ್ ನಿಂದ ಸ್ಪರ್ಧಿಸಿ ವಿಜೇತರಾದ ಎಂ. ಎಸ್ . ಮೈೂದು ಇವರಿಗೆ ವನಿತಾ ಲೀಗ್ ಗೋಳಿಯಡ್ಕ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ವನಿತಾ ಲೀಗ್ ಗೋಳಿಯಡ್ಕ ಘಟಕ ಅಧ್ಯಕ್ಷೆ ಫಾತಿಮ.ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದುಬೈ ಕೆ ಎಂ ಸಿ ಸಿ ಕಾಸರಗೋಡು ಮಂಡಲ ಉಪಾಧ್ಯಕ್ಷ ಎಂ.ಎಸ್. ಹಮೀದ್ , ಮುಸ್ಲಿಂ ಲೀಗ್ ವಾರ್ಡ್ ಅಧ್ಯಕ್ಷ ಇ.ಪಿ. ಅಬ್ದುಲ್ಲ , ಜಿ. ಮೊಹಮ್ಮದ್ , ಬಿ.ಕೆ .ಮೊಹಮ್ಮದ್ , ಶೆರೀಫ್ .ಬಿ.ಎಸ್ , ಮೊಹಮ್ಮದ್ ಅಶ್ರಫ್ , ಬಷೀರ್ ಗೋಳಿಯಡ್ಕ ಹಾಗೂ ವನಿತ ಲೀಗ್ ಕಾರ್ಯಕರ್ತರು ಉಪಸ್ಥಿತರಿದ್ದರು. ವನಿತ ಲೀಗ್ ಕಾರ್ಯದರ್ಶಿ ಖಮರುನ್ನೀಸ ಸ್ವಾಗತಿಸಿ, ಕೋಶಾಧಿಕಾರಿ ಹಾರಿಫ ನಿಝಾಮ್ ವಂದಿಸಿದರು.

0 Comments