ಕುಂಬಳೆ : ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಯ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯು ತೀವ್ರ ನಿಗಾವಹಿಸಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು ಈ ವೇಳೆ ಬೈಕ್ ನಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ ಕುಂಬಳೆ ಅಬಕಾರಿ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ. ಮಂಗಲ್ಪಾಡಿ ಸಮೀಪದ ಪೆರಿಂಕೋಡು ಹಸೈನಾರ್ ಎಂಬವರ ಪುತ್ರ ಅಬ್ದುಲ ಎಚ್.ಎಂ.ಬಂಧಿತ ಆರೋಪಿ. ಈತನ ಕೈ ವಶವಿದ್ದ 1.895 ಕಿಲೋ ಗಾಂಜಾ ಹಾಗೂ ಕೆಎಲ್ 14ಎಂ 5845 ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಸಹಾಯಕ ಅಬಕಾರಿ ನಿರೀಕ್ಷಕ (ಗ್ರೇಡ್) ಪೀತಾಂಬರನ್ ಕೆ., ಪ್ರಿವೆಂಟಿವ್ ಅಧಿಕಾರಿಗಳಾದ ಜಿಜಿನ್ ಎಂ.ವಿ ಮತ್ತು ಮಾನಸ್ ಕೆ.ವಿ., ಅಖಿಲೇಶ್ ಎಂ.ಎಂ. ಮತ್ತು ಕಣ್ಣನ್ ಕುಂಞಿ ಮತ್ತು ಚಾಲಕ ಪ್ರವೀಣ್ ಕುಮಾರ್ ಈ ತಂಡದಲ್ಲಿದ್ದರು.

0 Comments