Ticker

6/recent/ticker-posts

Ad Code

ಶ್ರೀ ಕ್ಷೇತ್ರ ಕಾಳ್ಯಂಗಾಡಿನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆ


ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವು 2026 ಎಪ್ರಿಲ್ 26ರಿಂದ ಮೇ 1ರ ತನಕ ಜರಗಲಿದೆ. ಇದರ ಸಮಿತಿ ರೂಪೀಕರಣ ಸಭೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೋಹನ್ ರಾಜ್ ವಹಿಸಿದರು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಡಾl ಅನಂತ ಕಾಮತ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ, ವಾರ್ಡ್ ಸದಸ್ಯೆ ಪುಷ್ಪಲತಾ, ಎಸ್.ಎಂ.ಎಸ್. ಕ್ಲಬ್ ನ ಅಧ್ಯಕ್ಷ ಗೋವಿಂದ, ಉದ್ಯಮಿ ವಿನಾಯಕ ಶೆಣೈ, ಪಾರೆಕಟ್ಟೆ ಅಯ್ಯಪ್ಪ ಕ್ಷೇತ್ರದ ವೇಣುಗೋಪಾಲ, ವೈದಿಕ ಶಿರೋಮಣಿ ಶ್ರೀ ನಾಗೇಂದ್ರ ಭಟ್, ಸುಕುಮಾರ ಕುದ್ರೆಪ್ಪಾಡಿ, ರಘು ಮೀಪುಗುರಿ, ಭುಜಂಗ ಮೀಪುಗುರಿ, ಕೊರಕ್ಕೋಡು ತರವಾಡಿನ ಉಪೇಂದ್ರ, ರೆಸಿಡೆನ್ಸಿಯಲ್ ಸಮಿತಿ ಅಧ್ಯಕ್ಷ ಶೌಕತ್, ಜಗದಂಬಾ ಕ್ಷೇತ್ರದ ಭಾಸ್ಕರ, ರಘು ಪೂಜಾರಿ, ಆಡಳಿತ ಮೊಕ್ತೇಸರ ಅಚ್ಯುತ ಕೆ. ಧರ್ಮದರ್ಶಿ ನಾರಾಯಣ ಪೂಜಾರಿ, ಪುಷ್ಪ ಕಾಳ್ಯಂಗಾಡ್ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಡಾl ಅನಂತ ಕಾಮತ್, ಗೌರವ ಸಲಹೆಗಾರರಾಗಿ ಗೋಪಾಲಕೃಷ್ಣ ವಾಂತಿಚಾಲ್, ಅಧ್ಯಕ್ಷರಾಗಿ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಪೂಜಾರಿ, ಜತೆ ಕಾರ್ಯದರ್ಶಿಗಳಾಗಿ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್ ಹಾಗೂ ಕೋಶಾಧಿಕಾರಿಯಾಗಿ ಶಾಂತಕುಮಾರ್ ಮುಂಡಿತ್ತಡ್ಕ  ಆಯ್ಕೆಯಾದರು. ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ವಿವಿಧ ಉಪಸಮಿತಿಯನ್ನು ರಚಿಸಲಾಯಿತು. ಸ್ಥಳೀಯ ಮಕ್ಕಳಿಂದ ಪ್ರಾರ್ಥನೆ ಜರಗಿತು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್  ಕೆ.ಆರ್. ಸ್ವಾಗತಿಸಿ,  ನಿರೂಪಿಸಿದರು. ಶಾಂತಕುಮಾರ್ ವಂದಿಸಿದರು.

Post a Comment

0 Comments