Ticker

6/recent/ticker-posts

Ad Code

ಮುಡಿಮಾರು ಮಲರಾಯ ಪ್ರತಿಷ್ಠಾ ವಾರ್ಷಿಕೋತ್ಸವ, ಸಂದರ್ಭ ಸಾಧಕರಿಗೆ ಸನ್ಮಾನ

ಮಂಜೇಶ್ವರ : ಮುಡಿಮಾರು ಶ್ರೀ ಮಲರಾಯ ಗುಳಿಗ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆದವು. ಬಡಾಜೆಬೂಡು ತಂತ್ರಿವರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು  ನಡೆಯಿತು. ಶ್ರೀ ಮಲರಾಯ ನೇಮೋತ್ಸವ ನಂತರ ಗುಳಿಗ ಕೋಲೋತ್ಸವ ಸಾಂಗವಾಗಿ ನೆರವೇರಲ್ಪಟ್ಟಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ವೇದಿಕೆಯಲ್ಲಿ ಸ್ಥಳಿಯ ಮಕ್ಕಳಿಂದ ವಿವಿಧ ನೃತ್ಯಾವಳಿ ಕಾರ್ಯಕ್ರಮಗಳು ಜರಗಿದವು. ನಂತರ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷರಾದ ಕೃಷ್ಣ ಶಿವಕೃಪ ಕುಂಜತ್ತೂರು ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮವು ನಡೆಯಿತು. ಮುಖ್ಯ ಅತಿಥಿಗಳಾಗಿ ಪೊಯೈ ಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ,  ಮಲರಾಯ ಕ್ಷೇತ್ರದ ಮುಖ್ಯ ಅರ್ಚಕ ಚಂದ್ರಹಾಸ ಪೂಜಾರಿ ಮುಡಿಮಾರು, ಅರಿಬೈಲು ಬರುವ ಧೂಮಾವತಿ ದೈವಸ್ಥಾನದ ದರ್ಶನ ಪಾತ್ರಿ ಅರಸ ಪೂಜಾರಿ ಕುದುಕೋರಿ, ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಮುಡಿಮಾರ್ ಇದರ ಅಧ್ಯಕ್ಷರಾದ ಚಂದ್ರಹಾಸ ಕೆದುಂಬಾಡಿ ಉಪಸ್ಥಿತರಿದ್ದರು. ಗಡಿನಾಡ ಕಲಾ ನಿಧಿ ಶಾರದಾ ಆರ್ಟ್ಸ್ ಮತ್ತು ಐಸಿರಿ ತಂಡದ ಸಾರಥಿಯಾದ ಕೃಷ್ಣ .ಜಿ. ಮಂಜೇಶ್ವರ, ಸು ಪ್ರಂ ಸೋ ಚಲನಚಿತ್ರದ ಭಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್, ಜೂನಿಯರ್ ರಾಷ್ಟ್ರೀಯ ಕಬಡ್ಡಿ ತಂಡ ಕರ್ನಾಟಕ ಇದರ ಸದಸ್ಯರಾದ ಸುಮುಖ್  ತಚ್ಚಾನಿ ತಲಪಾಡಿ ಇವರನ್ನು ಸನ್ಮಾನಿಸಲಾಯಿತು. ರವಿ ಮುಡಿಮಾರು ಸ್ವಾಗತಿಸಿ, ಮಾಧವ ಪೂಜಾರಿ ವಂದಿಸಿದರು. ಬಳಿಕ  ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಇದರ ಪ್ರಾಯೋಜಕತ್ವದಲ್ಲಿ  ಶಾರದ ಆರ್ಟ್ಸ್ ಐಸಿರಿ ತಂಡದವರಿಂದ "ಜೈ ಭಜರಂಗಬಲಿ " ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

Post a Comment

0 Comments