Ticker

6/recent/ticker-posts

Ad Code

ಕಾಸರಗೋಡು ಜಿ.ಪಂ.ಅಧಿಕಾರ ಎಡರಂಗಕ್ಕೆ : ಸಾಬು ಅಬ್ರಹಾಂ ಅಧ್ಯಕ್ಷ ,ಉಪಾಧ್ಯಕ್ಷರಾಗಿ ಕೆ.ಕೆ. ಸೋಯಾ ಆಯ್ಕೆ


ಕಾಸರಗೋಡು : ಎಲ್‌ಡಿಎಫ್ ನ ಸ್ಪಷ್ಟ ಬಹುಮತವಿರುವ ಕಾಸರಗೋಡು ಜಿಲ್ಲಾ ಪಂಚಾಯತ್‌ನಲ್ಲಿ, ಸಿಪಿಎಂನ ಸಾಬು ಅಬ್ರಹಾಂ ಅಧ್ಯಕ್ಷರಾಗಿ  ಅಧಿಕಾರ ವಹಿಸಿಕೊಂಡಿದ್ದಾರೆ. ಸಿಪಿಐನ ಕೆ.ಕೆ. ಸೋಯಾ ಉಪಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ಸಾಬು ಪ್ರಮಾಣ ವಚನ ನಡೆಸಿದರು. ಮಧ್ಯಾಹ್ನ ನಡೆದ ಚುನಾವಣೆಯಲ್ಲಿ, ಕೆ.ಕೆ. ಸೋಯಾ ಎಂಟು ಮತಗಳ ವಿರುದ್ಧ ಒಂಬತ್ತು ಮತಗಳನ್ನು ಪಡೆದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಕೆ ಪೆರಿಯ ಡಿವಿಷನ್   ಚುನಾಯಿತೆ ಮತ್ತು ರಾವಣೇಶ್ವರದ ಸಿ.ಅಚ್ಯುತ ಮೆನೊನ್ ಗ್ರಂಥಾಲಯದ ಸಮಿತಿ ಸದಸ್ಯೆ, ಬಾಲವೇದಿ ಕನ್ವೀನರ್ ಆಗಿಯೂ ಸೇವೆ ಸಲ್ಲಿದ್ದರು. ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಚುನಾವಣಾ ಕಾರ್ಯಕಲಾಪಗಳ ಮೇಲ್ವಿಚಾರಣೆ ನಡೆಸಿದರು. ಚುನಾವಣಾಧಿಕಾರಿ ಎಡಿಎಂ ಪಿ. ಅಖಿಲ್ ಮತ್ತು ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಎಸ್. ಬಿಜು ಚುನಾವಣೆಯನ್ನು ನಿರ್ವಹಿಸಿದರು.

Post a Comment

0 Comments