ಕಾಞಂಗಾಡು : ಕಾಞಂಗಾಡ್ ನಗರ ಸಭಾ ಅಧ್ಯಕ್ಷರಾಗಿ ವಿ.ವಿ. ರಮೇಶನ್ ಆಯ್ಕೆಯಾಗಿದ್ದಾರೆ. ಎಲ್ ಡಿಎಫ್ ನ ವಿ.ವಿ. ರಮೇಶನ್ ಕಾಞಂಗಾಡು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ನಗರ ಸಭೆಯ ದಕ್ಷಿಣ ನಿವಾಸಿಯಾದ ಅವರು 7ನೇ ವಾರ್ಡ್ ಅತಿಯಂಬುರಿನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇದು ಎರಡನೇ ಬಾರಿಗೆ ವಿ.ವಿ.ರಮೇಶನ್ ಕಾಞಂಗಾಡು ನಗರ ಆಡಳಿತದ ಚುಕ್ಕಾಣಿ ಹಿಡಿದಿರುವುದಾಗಿದೆ. ರಮೇಶನ್ ಸಿಪಿಐ(ಎಂ) ಕಾಸರಗೋಡು ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಮಂಜೇಶ್ವರದಿಂದ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕಾಸರಗೋಡಿನ ಗಡಿನಾಡಿನಲ್ಲೂ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು.

0 Comments