ಕಾಸರಗೋಡು : ಮಂಗಳವಾರ ರಾತ್ರಿ ಪೆರಿಯಾಟಡ್ಕ ಎಂಬಲ್ಲಿ ಮುಸ್ಲಿಂ ಲೀಗ್ - ಸಿಪಿಎಂ ನಡುವೆ ರಾಜಕೀಯ ಸಂಘರ್ಷ ನಡೆದಿದೆ. ಸಿಪಿಎಂ ಕಾರ್ಯಕರ್ತ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ 13 ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಬೇಕಲ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಸಂಘರ್ಷದಲ್ಲಿ ಗಾಯಗೊಂಡ ಸಿಪಿಎಂ ಕಾರ್ಯಕರ್ತ ಎನ್.ಕೆ. ದಿಲೀಶ್ (24) ಅವರನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಕಲ್ ಪೊಲೀಸರು ಅಶ್ರಫ್, ನಿಸಾರ್, ಸಾದಿಕ್ ಮತ್ತು ಕಂಡರೆ ಗುರುತು ಪತ್ತೆ ಹಚ್ಚಬಹುದಾದ 10 ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಸಿಪಿಎಂ ಕಾರ್ಯಕರ್ತನ ಮೇಲೆ ದೊಣ್ಣೆ ಮತ್ತು ಗುದ್ದಲಿಗಳಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಘಟನೆಯ ಬಗ್ಗೆ ತಿಳಿದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಗಾಯಾಳುವಿನ ಹೇಳಿಕೆಗಳನ್ನು ಪಡೆದು ಪ್ರಕರಣ ದಾಖಲಿಸಿದ್ದಾರೆ.

0 Comments