Ticker

6/recent/ticker-posts

Ad Code

ಹೊಸ ವರ್ಷದ ಕೊಡುಗೆ : ಜನವರಿ 1ರಿಂದ ಯುಎಇಯಿಂದ ಕೇರಳಕ್ಕೆ ಬರುವ ವಿಮಾನಗಳ ದರಗಳು ಇಳಿಮುಖ ಸಾಧ್ಯತೆ

ಅಬುಧಾಬಿ : ಕ್ರಿಸ್‌ಮಸ್-ಹೊಸ ವರ್ಷದ ಸಂದರ್ಭದಲ್ಲಿ ಗಗನಕ್ಕೇರುತ್ತಿರುವ ವಿಮಾನ ದರಗಳು ಇದೀಗ  ಅನಿವಾಸಿಯರಿಗೆ ಹೊಸ ವರ್ಷದ ಉಡುಗೊರೆಯಾಗಿ ಜನವರಿ 1ರಿಂದ  ಯುಎಇಯಿಂದ ವಿಮಾನ ದರಗಳಲ್ಲಿ ಗಮನಾರ್ಹ ಇಳಿಕೆ ಕಂಡುಬರಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ತಮ್ಮ ರಜಾದಿನಗಳನ್ನು ಆಚರಿಸಲು ಕೇರಳ ಸೇರಿದಂತೆ ಸ್ಥಳಗಳಿಗೆ ಪ್ರಯಾಣಿಸಲು ಯೋಜನೆ ಇರಿಸಿದವರಿಗೆ ಇದು ದೊಡ್ಡ ಕೊಡುಗೆಯಾಗಿದೆ. ದುಬೈಯಿಂದ ಕೊಚ್ಚಿಗೆ ಪ್ರಸ್ತುತ ಸರಾಸರಿ ದರ 870 ದಿರ್ಹಮ್‌ಗಳಿಗಿಂತ ಹೆಚ್ಚಿದ್ದು, ಜನವರಿ 1 ರಂದು 694 ದಿರ್ಹಮ್‌ಗಳಿಗೆ ಇಳಿಯಲಿದೆ. ಇದು ಪ್ರಯಾಣಿಕರಿಗೆ ಸುಮಾರು ನಾಲ್ಕು ಸಾವಿರ ರೂಪಾಯಿಗಳನ್ನು ಉಳಿಸುತ್ತದೆ. ಕೊಚ್ಚಿಯನ್ನು ಹೊರತುಪಡಿಸಿ, ಕೋಝಿಕ್ಕೋಡ್ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಿಗೂ ಇದೇ ರೀತಿಯ ದರ ಕಡಿತವನ್ನು ನಿರೀಕ್ಷಿಸಲಾಗಿದೆ. ಕೇರಳಕ್ಕೆ ಮಾತ್ರವಲ್ಲದೆ, ಅಬುಧಾಬಿಯಿಂದ ಬೈರುತ್‌ಗೆ ಮತ್ತು ದುಬೈನಿಂದ ಕೈರೋ ಮತ್ತು ಟಿಬಿಲಿಸಿಗೆ ಜನವರಿ 1 ರಂದು ಟಿಕೆಟ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬರಲಿದೆ. ಪ್ರಸ್ತುತ 700 ದಿರ್ಹಮ್‌ಗಳಿಗಿಂತ ಹೆಚ್ಚು ಬೆಲೆಯ ಬೈರುತ್‌ಗೆ ಟಿಕೆಟ್‌ಗಳು ಜನವರಿ 1 ರಂದು ಕೇವಲ 114 ದಿರ್ಹಮ್‌ಗಳಿಗೆ ಲಭ್ಯವಿರುತ್ತವೆ.

Post a Comment

0 Comments