Ticker

6/recent/ticker-posts

Ad Code

ಏತಡ್ಕ ಶಾಲೆಯಲ್ಲಿ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಆರಂಭ

 

ಪೆರ್ಲ : ನಾಲಂದ ಮಹಾವಿದ್ಯಾಲಯದ 2025- 26 ನೇ ಸಾಲಿನ ಎನ್ಎಸ್ಎಸ್ ವಾರ್ಷಿಕ ಶಿಬಿರವು ಏತಡ್ಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸತೀಶ್ಚಂದ್ರ ಭಂಡಾರಿ ಕೋಲಾರು ಸಪ್ತದಿನ ಶಿಬಿರವನ್ನು ಉದ್ಘಾಟಿಸಿ, ಸಮಾಜಸೇವೆಯಿಂದ ವಿದ್ಯಾರ್ಥಿಗಳಿಗೆ ಸಮಾಜದೊಂದಿಗೆ ಬೆರೆಯಲು ಒಂದು ಅವಕಾಶ ಎಂದು ಹೇಳಿದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶಂ ನಾ  ಖಂಡಿಗೆ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತ್ ಏತಡ್ಕ ವಾರ್ಡ್ ಸದಸ್ಯರು ಮತ್ತು ಶಿಬಿರದ ಸಂಘಟಕ ಸಮಿತಿಯ ಕನ್ವೀನರ್ ಆದ  ನಯನ ಪಿ, ಏತಡ್ಕ ಶಾಲೆಯ ಪ್ರಬಂಧಕ ಶ್ರೀಧರ್, ಶಾಲೆಯ ಮುಖ್ಯೋಪಾಧ್ಯಾಯ ರಾಜಾರಾಮ ಕುಂಜಾರು, ಏತಡ್ಕ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಮಿತ್ ರಾಜ್, ನಾಲಂದ ಮಹಾವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗೇಶ್ ನಾಯ್ಕ್, ಶಿಬಿರದ ಸಂಘಟಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆ ಕೆ, ಶಾಲೆಯ MPTA ಅಧ್ಯಕ್ಷೆ  ಅನ್ನಪೂರ್ಣ ಎಸ್ ಭಟ್, ವಿವಿಧ ಕುಟುಂಬಶ್ರೀಯ ಸದಸ್ಯರು, ಆಶಾ ಕಾರ್ಯಕರ್ತೆಯರು, ಮಾಜಿ ಎನ್ಎಸ್ಎಸ್ ಸೆಕ್ರೆಟರಿ ರೋಬಿತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ  ಸ್ವಾಗತಿಸಿ, ಅನುಜ್ಞ ವಂದಿಸಿದರು.

Post a Comment

0 Comments