ಕಾಸರಗೋಡು : ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಎಡನೀರು ಮಠಕ್ಕೆ ತೆರಳಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರನ್ನು ಬೇಟಿಯಾಗಿ ಮನವಿ ಪತ್ರ ನೀಡಿ ಶ್ರೀಗಳಿಂದ ಮಾರ್ಗದರ್ಶನ ಹಾಗೂ ಆಶೀರ್ವಾದ ಪಡೆದರು. ಈ ಶುಭ ಸಂದರ್ಭದಲ್ಲಿ ಮಂದಿರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರು ಉತ್ಸವ ಸಮಿತಿ ಅಧ್ಯಕ್ಷರಾದ ಕೆ.ಎಸ್.ಮಲ್ಯ, ಉಪಾಧ್ಯಕ್ಷ ರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಗುಣಪಾಲ ಅಮೈ, ಕಾರ್ಯದರ್ಶಿ ರಾಮಚಂದ್ರ, ಸುರೇಶ್, ರಾಜೇಶ್ ಮತ್ತು ಕೋಶಾಧಿಕಾರಿ ವೇಣುಗೋಪಾಲ ಉಪಸ್ಥಿತರಿದ್ದರು.

0 Comments