Ticker

6/recent/ticker-posts

Ad Code

ಮೂರು ತಿಂಗಳ ಮಗುವಿನ ತಾಯಿ ಮಲಗುವ ಕೋಣೆಯಲ್ಲೇ ಆತ್ಮಹತ್ಯೆ

 

ಉಪ್ಪಳ : ಸಮೀಪದ  ಸೋಂಕಾಲು ಎಂಬಲ್ಲಿ ಗೃಹಿಣಿಯೋರ್ವಳ ಮೃತದೇಹ ಮಲಗುವ ಕೋಣೆಯ ಕಿಟಿಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ಕೊಡಂಗಾಯಿ ರಸ್ತೆಯ ಮೊಯ್ತೀನ್ ಸವಾದ್ ಅವರ ಪತ್ನಿ ಫಾತಿಮತ್ ನಸ್ಬೀನಾ (25) ಮೃತ ಯುವತಿ.  ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ರಕ್ಷಿಸಲು ಸಾಧ್ಯವಾಗಲಿಲ್ಲ. ನಸ್ಬೀನಾ ಮೂರು ತಿಂಗಳ ಮಗುವಿನ ತಾಯಿಯಾಗಿದ್ದಾಳೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Post a Comment

0 Comments