Ticker

6/recent/ticker-posts

Ad Code

ಮನೆಯ ಕಂಪೌಂಡ್ ಹೊರಗೆ ನಿಲ್ಲಿಸಿದ್ದ ರಿಕ್ಷಾ ಕದ್ದ ಆರೋಪಿ ಸೆರೆ

 

ಮಂಗಳೂರು: ನಿಲ್ಲಿಸಲಾಗಿದ್ದ ಆಟೋ ರಿಕ್ಷಾವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಅಕ್ಕರೆ ಕೆರೆ ನಿವಾಸಿ ಮಹಮ್ಮದ್ ಶಾಝಿಲ್ (29) ಎಂದು ಗುರುತಿಸಲಾಗಿದೆ. ಚೋಟಾ ಮಂಗಳೂರಿನ ಭಗವತಿ ರಸ್ತೆಯಲ್ಲಿ ನರೇಂದ್ರ ಕುಮಾ‌ರ್ ಎಂಬುವವರು ಡಿಸೆಂಬರ್ 13ರಂದು ರಾತ್ರಿ ತಮ್ಮ ಆಟೋವನ್ನು ಭಗವತಿ ರಸ್ತೆಯಲ್ಲಿರುವ ಮನೆಯ ಕಂಪೌಂಡ್ ಹೊರಗೆ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ನೋಡಿದಾಗ ವಾಹನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಡಿಸೆಂಬರ್ 19ರಂದು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಳವು ಮಾಡಲಾಗಿದ್ದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

Post a Comment

0 Comments