Ticker

6/recent/ticker-posts

Ad Code

ಆರಿಕ್ಕಾಡಿಯ ಟೋಲ್ ಗೇಟ್ ವಿಷಯದಲ್ಲಿಇಂಡಿ ಮೈತ್ರಿಕೂಟ ಜನರಿಗೆ ತಪ್ಪು ಭಾವನೆ ಮೂಡಿಸುತ್ತಿದೆ - ಶ್ರೀಕಾಂತ್

 

ಕುಂಬಳೆ : ಆರಿಕ್ಕಾಡಿಯ ಟೋಲ್ ಗೇಟ್ ವಿಷಯದಲ್ಲಿ ಅನಗತ್ಯ ವಿವಾದ ಸೃಷ್ಟಿಸಿ ಜನರಲ್ಲಿ ತಪ್ಪು ಭಾವನೆ ಮೂಡಿಸಲು ಇಂಡಿ ಮೈತ್ರಿಕೂಟದ ಘಟಕ ಪಕ್ಷಗಳಾದ ಮುಸ್ಲಿಂ ಲೀಗ್ ಮತ್ತು ಸಿಪಿಐಎಂ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಕೋಝಿಕ್ಕೋಡ್ ವಲಯ ಅಧ್ಯಕ್ಷ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ. ಟೋಲ್ ಸಂಬಂಧವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಕೀಯ ಪಕ್ಷ ಪ್ರತಿನಿಧಿಗಳ ಸಭೆ ಕರೆದಿರಲಿಲ್ಲವೆಂದೂ, ಜನಪ್ರತಿನಿಧಿಗಳು ಸಭೆಯಿಂದ ಹೊರ ನಡೆಯಬೇಕಾದ ಸಂಧರ್ಭ ಉಂಟಾಗಿಲ್ಲ ಎಂದು ಜಿಲ್ಲಾಧಿಕಾರಿಗಳೇ ಸ್ಪಷ್ಟೀಕರಿಸಿದ ಹಿನ್ನೆಲೆಯಲ್ಲಿ ಆರೋಪ ಮಾಡಿದವರನ್ನು ವಿಚಾರಣೆಗೊಳಪಡಿಸಿ ರಾಜಕೀಯ ಗೂಢಾಲೋಚನೆ ಬಯಲಿಗೆಳೆಯಬೇಕೆಂದು ಶ್ರೀಕಾಂತ್ ಒತ್ತಾಯಿಸಿದರು.

ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮತ್ತು ಸಿಪಿಐಎಂ ಕುಂಬಳೆ ಏರಿಯ ಸೆಕ್ರೆಟರಿ ಸುಬೈರ್ ಜನರು ತಪ್ಪೆಣಿಸುವ ಹೇಳಿಕೆ ನೀಡುತ್ತಿದ್ದಾರೆ. ಉಚ್ಛನ್ಯಾಯಾಲಯದಲ್ಲಿ ಟಾಲ್ ವಿರುದ್ಧ ನೀಡಿದ ಮೇಲ್ಮನವಿ ತಿರಸ್ಕೃತಗೊಳ್ಳುವುದೆಂದು ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಪೂರ್ವಯೋಜಿತವಾಗಿ ರೂಪಿಸಿದ ಅಜೆಂಡಾದಂತೆ ಈರ್ವರೂ ನಾಟಕ ಮಾಡುತ್ತಿರುವುದಾಗಿ ಕೆ. ಶ್ರೀಕಾಂತ್ ಹೇಳಿಕೆಯಲ್ಲಿ  ತಿಳಿಸಿದ್ದಾರೆ.

Post a Comment

0 Comments