Ticker

6/recent/ticker-posts

Ad Code

33 ಬೂತ್‌ಗಳಲ್ಲಿ ನಕಲಿ ಮತದಾನಗೈಯಲು ಮುಸ್ಲಿಂ ಲೀಗ್ ಪ್ರಯತ್ನ: ಕೆ. ಸುರೇಂದ್ರನ್ ಆರೋಪ; ಚುನಾವಣಾ ಆಯೋಗಕ್ಕೆ ದೂರು : ಕ್ರಮಕ್ಕೆ ಆಗ್ರಹ

 

ಮಂಜೇಶ್ವರ : ಚುನಾವಣೆಯಲ್ಲಿ ಸೋಲುವುದು ಖಚಿತವಾಗಿರುವ ಮುಸ್ಲಿಂ ಲೀಗ್ ಅಭ್ಯರ್ಥಿ ಮತ್ತು ಯುಡಿಎಫ್ ನಾಯಕತ್ವವು ದೊಡ್ಡ ಪ್ರಮಾಣದಲ್ಲಿ ನಕಲಿ‌ ಮತದಾನಕ್ಕೆ  ಪ್ರಯತ್ನಿಸುತ್ತಿದೆ ಎಂದು ಮಂಜೇಶ್ವರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಮುಸ್ಲಿಂ ಲೀಗ್ ಕಾರ್ಯಕರ್ತರು ವಿದೇಶಗಳಲ್ಲಿದ್ದು ಅವರ ಮತಗಳನ್ನು  ನಕಲೀಕರಿಸಿ  ಚಲಾಯಿಸಲು ಮತದಾರರ ಚೀಟಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.  ಲೀಗ್‌ನ ಬಿಎಲ್‌ಒಗಳ ಮೂಲಕ ಈ ಚೀಟಿಗಳನ್ನು ಸಂಗ್ರಹಿಸಲಾಗಿದೆ. ಮುಸ್ಲಿಂ ಲೀಗ್ ಪ್ರಭಾವ ಹೊಂದಿರುವ ಸುಮಾರು 33 ಬೂತ್‌ಗಳಲ್ಲಿ ಮತಗಳನ್ನು ವಂಚಿಸುವ ಪ್ರಯತ್ನ ನಡೆಯುತ್ತಿದೆ. ಪ್ರತಿ ಚುನಾವಣೆಯಲ್ಲೂ ಪ್ರಯೋಗಿಸುವ  ಈ ನಕಲಿ ಮತ ತಂತ್ರವನ್ನು ಈ ಬಾರಿಯೂ ನಡೆಸಲು ಪ್ರಯತ್ನಿಸಲು ಯುಡಿಎಫ್ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ನಕಲಿ ಗುರುತಿನ ಚೀಟಿಗಳನ್ನು ಸಂಗ್ರಹಿಸಲಾಗುತ್ತಿದೆ. ಮಹಿಳೆಯರು ಬುರ್ಖಾ ಧರಿಸಿರುವುದರಿಂದ ನಕಲಿ ಮತದಾನ ಮಾಡಲು ಅವರನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಶಾಸಕರು ನೇರವಾಗಿ ಇದರ ನೇತೃತ್ವ ವಹಿಸುತ್ತಿದ್ದಾರೆ. ಇದರ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವಂತೆ ಕೆ. ಸುರೇಂದ್ರನ್  ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. 

ಎಲ್ಲಾ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಲವಾದ ಪೊಲೀಸ್ ಮತ್ತು ಮಿಲಿಟರಿ ನಿಯೋಜನೆ ಇಡಬೇಕು. ಬಿಜೆಪಿಯ ಮತಗಟ್ಟೆ ಏಜೆಂಟರು ನಕಲಿ ಮತದಾನವನ್ನು ಪ್ರಶ್ನಿಸುತ್ತಾರೆ. ನಕಲಿ ಮತದಾನಕ್ಕೆ ಸಹಾಯ ಮಾಡಿದ ಬಿಎಲ್‌ಒಗಳನ್ನು ಕಾನೂನುಬದ್ಧವಾಗಿ ಎದುರಿಸಲಾಗುವುದು ಎಂದು ಸುರೇಂದ್ರನ್ ಘೋಷಿಸಿದರು. ಮುಸ್ಲಿಂ ಲೀಗ್‌ನ ಭದ್ರಕೋಟೆಯಾಗಿರುವ ಮಂಜೇಶ್ವರ ಪಂಚಾಯತ್‌ನ 4, 8, 12, 13, 16 ಮತ್ತು 18 ಬೂತ್‌ಗಳಲ್ಲಿ; ಮಂಗಲ್ಪಾಡಿ ಪಂಚಾಯತ್‌ನ 74, 77, 75, 78, 114, 116, 80, 81, 85, 89, 90, ಮತ್ತು 98 ಬೂತ್‌ಗಳಲ್ಲಿ; ಕುಂಬಳೆ ಪಂಚಾಯತ್‌ನ 151, 182, 179, 183, 189, ಮತ್ತು 185 ಬೂತ್‌ಗಳಲ್ಲಿ; ಮತ್ತು ವರ್ಕಾಡಿ ಪಂಚಾಯತ್‌ನ 34, 35, 36, 45, 47, 43, 42, ಮತ್ತು 38 ಬೂತ್‌ಗಳಲ್ಲಿ ನಕಲಿ ಮತಗಳ ಪ್ರಯತ್ನಗಳು ನಡೆಯುತ್ತಿವೆ ಎಂದು ಕೆ. ಸುರೇಂದ್ರನ್ ಆರೋ ಪಿಸಿದರು.


ಜಾಹೀರಾತು

Post a Comment

0 Comments