Ticker

6/recent/ticker-posts

Ad Code

ಕೇಂದ್ರ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ನಿಧನ

 

ನವದೆಹಲಿ : ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಸಂಪುಟದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದ ಮೊಹ್ಸಿನಾ ಕಿದ್ವಾಯಿ ಅವರು ಇಂದು (ಏ.8) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮೊಹ್ಸಿನಾ ಕಿದ್ವಾಯಿ ಅವರು ತಮ್ಮ 94ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಸಂಜೆ 5ಗಂಟೆಗೆ ನಿಜಾಮುದ್ದೀನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಅಳಿಯ ರಾಜಿ ಉರ್ ರೆಹಮಾನ್ ಕಿದ್ವಾಯಿ ತಿಳಿಸಿದ್ದಾರೆ. ಮೊಹ್ಸಿನಾ ಕಿದ್ವಾಯಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

1930ರ ಜನವರಿ 1ರಂದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಜನಿಸಿದ ಮೊಹ್ಸಿನಾ ಕಿದ್ವಾಯಿ ಅವರು 1977ರಲ್ಲಿ ಮೀರತ್‌ನಿಂದ ಲೋಕಸಭೆಗೆ ಆಯ್ಕೆಯಾದರು. ಬಳಿಕ 1982ರಲ್ಲಿ ಮೊದಲ ಬಾರಿಗೆ ಕಾರ್ಮಿಕ ಸಚಿವರಾಗಿ (1982-83) ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (1983-84), ಗ್ರಾಮೀಣಾಭಿವೃದ್ಧಿ (1984), ಸಾರಿಗೆ (1986) ಮತ್ತು ನಗರಾಭಿವೃದ್ಧಿ (1986-89) ಸೇರಿದಂತೆ ವಿವಿಧ ನಿರ್ಣಾಯಕ ಖಾತೆಗಳನ್ನು ನಿರ್ವಹಿಸಿದರು. ನಂತರ 2004ರಿಂದ 2016ರವರೆಗೆ ರಾಜ್ಯಸಭಾ ಸಂಸದರಾಗಿ ಛತ್ತೀಸ್‌ಗಢವನ್ನು ಪ್ರತಿನಿಧಿಸಿದ್ದರು.


ಜಾಹೀರಾತು



Post a Comment

0 Comments