Ticker

6/recent/ticker-posts

Ad Code

ಅಭಿವೃದ್ಧಿಗಾಗಿ ಬಿಜೆಪಿ ಏಕೈಕ ಆಯ್ಕೆ: ಕೆ. ಅಣ್ಣಾಮಲೈ

ಪೆರ್ಲ : ಕೇರಳ ವಿಧಾನಸಭಾ ಕ್ಷೇತ್ರದ ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನ ಮಂಜೇಶ್ವರದ ಎನ್ ಡಿ ಎ ಅಭ್ಯರ್ಥಿ ಕೆ. ಸುರೇಂದ್ರನ್ ಮತ್ತು ಅಣ್ಣಾಮಲೈ ಅವರ ರೋಡ್ ಶೋ ಪೆರ್ಲ ಪೇಟೆಯನ್ನು ಮೋಡಿ ಮಾಡಿದೆ. ಅನೇಕ ಕಾರ್ಯಕರ್ತರು, ಚೆಂಡೆ, ಬ್ಯಾಂಡ್ ವಾದನಗಳು ಮತ್ತು ಮುತ್ತಿನ ಛತ್ರಿಗಳೊಂದಿಗೆ ಸಾಲುಗಟ್ಟಿ ಸಾಗಿ ಬಂದ ಕಾರ್ಯಕರ್ತರ ಮೆರವಣಿಗೆ ವಿಶೇಷ ಮೆರಗು ಮೂಡಿಸಿತು. 

ಬೆಳಿಗ್ಗೆ ಪೆರ್ಲ ಚೆಕ್ ಪೋಸ್ಟ್ ಪರಿಸರದಿಂದ  ಪ್ರಾರಂಭವಾದ ರೋಡ್ ಶೋ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಪೇಟೆಯ ಕೇಂದ್ರ ಬಿಂದುವಿನಲ್ಲಿ ಕೊನೆಗೊಂಡಿತು.  

ಅಭಿವೃದ್ಧಿ, ಅಭಿವೃದ್ಧಿ, ಅಭಿವೃದ್ಧಿಯೇ ಬಿಜೆಪಿಯ ಏಕೈಕ ಘೋಷಣೆ ಎಂದು ಕೆ. ಅಣ್ಣಾಮಲೈ ಹೇಳಿದರು. ಕೆ. ಸುರೇಂದ್ರನ್ ವಿಧಾನಸಭೆಯಲ್ಲಿ ಇಲ್ಲದಿದ್ದರೆ, ಅದು ಕೇರಳಕ್ಕೆ ನಷ್ಟ. ಕೆ. ಸುರೇಂದ್ರನ್  ರಿಂದ ಮಂಜೇಶ್ವರದ ಅಭಿವೃದ್ಧಿ  ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.  ಕೆ. ಸುರೇಂದ್ರನ್ ಅವರು ಮಂಜೇಶ್ವರವನ್ನು ಗೆಲ್ಲಲು ಸ್ಪರ್ಧಿಸುತ್ತಿದ್ದಾರೆ, ಗೆದ್ದರೆ ಕ್ಷೇತ್ರದ ಸಮಗ್ರ ಪ್ರಗತಿಗೆ ಶ್ರಮಿಸುವುದಾಗಿ ಹೇಳಿದರು.


                                                

                                                                        ಜಾಹೀರಾತು





Post a Comment

0 Comments