ಪೆರ್ಲ : ಇಲ್ಲಿಗೆ ಸನಿಹದ ಬಜಕೂಡ್ಲು ಮುಗೇರುಹಿತ್ತಿಲು ಸುವರ್ಣ ತರವಾಡು ನೂತನ ಮನೆಯ ಗೃಹಪ್ರವೇಶ, ಧೂಮಾವತಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ಧರ್ಮದೈವಗಳ ನೇಮೋತ್ಸವ ಏ.11ರಿಂದ 13ರ ವರೆಗೆ ವಿವಿಧ ವೈದಿಕ, ಧಾಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು. ಆಚಾರ್ಯವರ್ಯರಾದ ವೇದಮೂರ್ತಿ ಚಂದ್ರಶೇಖರ ನಾವಡ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು.
ಏ.11ರಂದು ಸಂಜೆ 4ಕ್ಕೆ ಆಚಾರ್ಯವರ್ಯರಾದ ಚಂದ್ರಶೇಖರ ನಾವಡ ಇವರ ಆಗಮನ, 4:30 ಕ್ಕೆ ಉಗ್ರಾಣ ಮುಹೂರ್ತ, 5 ರಿಂದ ಆಚಾರ್ಯಾದಿ ಋತ್ವಿಗ್ವರಣ, ಸ್ವಸ್ತಿ, ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ ರಾಕ್ಷೋಘ್ನ ಹವನ, ವಾಸ್ತು ಹವನ, ವಾಸ್ತು ಪೂಜೆ, ದಿಕ್ಪಾಲ ಬಲಿ, ನಾಗಬಿಂಬ ಶುದ್ಧಿ, ಆಯುಧಾದಿ ಬಿಂಬ ಶುದ್ಧಿ ನಡೆಯುವುದು.
12ರಂದು ಬೆಳಗ್ಗೆ 6ಕ್ಕೆ ಗಣಪತಿ ಹವನ, ಕಲಶಪೂಜೆ, 8:45ರಿಂದ 10-16ರ ಒಳಗೆ ಒದಗುವ ಶುಭ ಸುಮುಹೂರ್ತದಲ್ಲಿ ನೂತನ ತರವಾಡುಮನೆ ಗೃಹಪ್ರವೇಶ, ನಾಗದೇವರ ಪ್ರತಿಷ್ಠೆ, ಧರ್ಮದೈವ ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ ಹಾಗೂ ಕೊರತಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ದೈವಗಳಿಗೆ ತಂಬಿಲ, 11.00 ರಿಂದ ಶ್ರೀ ವೆಂಕಟರಮಣ ದೇವರ ಹರಿ ಸೇವೆ, ನಂತರ ಭಜನಾ ಸೇವೆ ನಡೆಯುವುದು. ಸಂಜೆ 6.30ಕ್ಕೆ ಸಂಧ್ಯಾ ದೀಪ ಕಾರ್ಯಕ್ರಮ ನಡೆಯುವುದು. ಸಂಜೆ 6:40 ಕ್ಕೆ ಧರ್ಮದೈವಗಳ ಭಂಡಾರ ಇಳಿಯುವುದು, 7ಕ್ಕೆ ಬಜಕೂಡ್ಲು ಗುಳಿಗ ಭಂಡಾರ ಕೊಟ್ಯದಿಂದ ಗುಳಿಗ ಭಂಡಾರದ ಆಗಮನ, ರಾತ್ರಿ ಗಂಟೆ 7.30 ರಿಂದ ತೊಡಂಙಲ್, ರಾತ್ರಿ 8 ರಿಂದ ಗುಳಿಗ ದೈವದ ಕೋಲ, 10:30 ರಿಂದ ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮ ನಡೆಯುವುದು. 13ರಂದು ಬೆಳಗ್ಗೆ 6ರಿಂದ ಭಜನಾ ಸಂಕೀರ್ತನೆ, 11ರಿಂದ ಶ್ರೀ ಧೂಮಾವತಿ ದೈವದ ನೇಮ, ಸಂಜೆ 3ಕ್ಕೆ ಕೊರತಿ ದೈವದ ಕೋಲ ಜರಗಲಿದೆ.
ಜಾಹೀರಾತು


0 Comments