Ticker

6/recent/ticker-posts

Ad Code

ಬಹಿರಂಗ ಪ್ರಚಾರದ ಕೊನೆಯ ಕ್ಷಣ ವರ್ಣರಂಜಿತಗೊಳಿಸಿದ ಎನ್‌ಡಿಎ ರೋಡ್‌ಶೋ


 ಕಾಸರಗೋಡು :  ಎನ್‌ಡಿಎ ಕಾಸರಗೋಡು ಕ್ಷೇತ್ರದ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರ ಪಥಸಂಚಲನ ಹಾಗೂ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಹಾಗೂ ಉತ್ಸಾಹ ನಗರವನ್ನು ರಂಗೇರಿಸಿತು. ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ಆರಂಭವಾದ ಪಥಸಂಚಲನದಲ್ಲಿ ನೂರಾರು ಕಾರ್ಯಕರ್ತರು ಅಭ್ಯರ್ಥಿಗಳ ಫಲಕಗಳು ಹಾಗೂ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. 

ರೋಡ್ ಶೋನಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪನ್ವೇಲ್ ಶಾಸಕ ಪ್ರಶಾಂತ್ ಠಾಕೂರ್, ಚಿತ್ರನಟಿ ಲಕ್ಷ್ಮೀ ಪ್ರಿಯಾ, ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಜಿಲ್ಲಾ ಉಪಾಧ್ಯಕ್ಷ ರಮೇಶ್, ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ.ಮೊದಲಾದವರು ಭಾಗವಹಿಸಿದ್ದರು.


ಜಾಹೀರಾತು


Post a Comment

0 Comments