ನಲ್ಕದ ಸಕ್ರಿಯ ಬಿಜೆಪಿ ಕಾರ್ಯಕರ್ತ ಕಾಂಗ್ರೆಸ್ ಸೇರ್ಪಡೆ
ಪೆರ್ಲ : ಚುನಾವಣೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇರುವ ನಡುವೆ ಎಣ್ಮಕಜೆಯಲ್ಲಿ ಬಿಜೆಪಿ ಕಾರ್ಯಕರ್ತರೋರ್ವಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಬಗ್ಗೆ ವರದಿಯಾಗಿದೆ.
ನಲ್ಕದ ಸಕ್ರಿಯ ಬಿಜೆಪಿ ಕಾರ್ಯಕರ್ತ ವಿನಯ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು.ಕಾಂಗ್ರೆಸ್ ಎಣ್ಮಕಜೆ ಮಂಡಲ ಅಧ್ಯಕ್ಷ ಬಿ.ಎಸ್.ಗಾಂಭೀರ್ ನೇತೃತ್ವದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆಎಸ್ ರವರು ವಿನಯ್ ರವರನ್ನು ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.ಈ ನಡುವೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಹಲವೆಡೆ ಸೋಮಶೇಖರ್ ನೇತೃತ್ವದಲ್ಲಿ ನಡೆದ ಅಪರೇಶನ್ ಹಸ್ತದ ಒಂದು ಭಾಗ ಇದಾಗಿದೆ ಎಂದು ಪಕ್ಷದ ಬೆಂಬಲಿಗರು ತಿಳಿಸಿದ್ದಾರೆ.

0 Comments