ಬದಿಯಡ್ಕ : ಕುಂಬ್ಡಾಜೆ ಪಂಚಾಯತ್ ಮಟ್ಟದ ಮೂರನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರೂಪೀಕರಣ ಸಭೆಯು ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಜರಗಿತು. ಕಳೆದ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಮಾರ್ಪನಡ್ಕ ಅವರು ಅಧ್ಯಕ್ಷತೆ ವಹಿಸಿದರು. ಕುಂಬ್ಡಾಜೆ ಪಂಚಾಯತ್ ಉಪಾಧ್ಯಕ್ಷ ರವೀಂದ್ರ, ರೈ ಗೋಸಾಡ, ವಾರ್ಡ್ ಸದಸ್ಯೆ ಸೌಭಾಗ್ಯಲಕ್ಷ್ಮೀ, ನಯನ ಕಾನಕಜೆ ಉಪಸ್ಥಿತರಿದ್ದರು.
ಸಂಸ್ಕೃತ ಭಾರತ ಜಿಲ್ಲಾ ಸಂಯೋಜಕರಾದ ಮಂಜುನಾಥ ಉಡುಪ ಕುಂಟಾರು ಗಣೇಶೋತ್ಸವ ಯಶಸ್ವಿಯಾಗಿ ನಡೆಸುವುದಕ್ಕೆ ಬೇಕಾದ ರೂಪುರೇಖೆಯ ಬಗ್ಗೆ ಮುಖ್ಯ ಸಲಹೆಗಾರರಾಗಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಕುಂಬ್ಡಾಜೆ ಪಂಚಾಯತಿನ ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷರಾದ ಡಾ. ವೇಣುಗೋಪಾಲ ಕಳೆಯತೋಡಿ, ಎರಡನೇ ವರ್ಷದ ಗಣೇಶೋತ್ಸವ ಸಮಿತಿ ಮಾತೃ ಮಂಡಳಿ ಅಧ್ಯಕ್ಷೆ ವೀಣಾ ಭಾಸ್ಕರ್, ಗಣೇಶೋತ್ಸವ ಕಾರ್ಯಕ್ರಮದ ಪ್ರಧಾನ ತಂತ್ರಿಗಳಾದ ಶಂಕರನಾರಾಯಣ ಶರ್ಮ ಗೋಸಾಡ ಶುಭಾಶಂಸನೆಗೈದರು.
ಹರಿನಾರಾಯಣ ಮಾಸ್ಟರ್ ಶೀರಂತಡ್ಕ, ಕೃಷ್ಣ ಶರ್ಮ ಏತಡ್ಕ, ಎಂ. ವಿ ಗಂಗಾಧರ ಮವ್ವಾರು, ಗಂಗಾಧರ ರೈ ಮಠದ ಮೂಲೆ, ಕೃಷ್ಣ ಮಣಿಯಾಣಿ ಅಗಲ್ಪಾಡಿ, ಹರಿಪ್ರಸಾದ್ ರೈ ಪುತ್ರಕಳ ಮುಂತಾದವರು ಸೂಕ್ತ ಸಲಹೆ ಸೂಚನೆ ನೀಡಿ ಸಹಕರಿಸಿದರು
ಮೂರನೇ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಕೃಷ್ಣ ಡಿ ಬೆಳೆಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ಹಾಗೂ ಮಾತೃ ಮಂಡಳಿ ಅಧ್ಯಕ್ಷರಾಗಿ ವೀಣಾ ಗಣಪತಿ ಭಟ್ ಎಂಬಿವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶ್ರೀಕೃಷ್ಣಾಮೃತಂ ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯ ವೆಂಕಟೇಶ್ ಶರ್ಮ ನಿರೂಪಿಸಿದರು. ಎರಡನೇ ವರ್ಷದ ಗಣೇಶೋತ್ಸವ ಸಮಿತಿ ಖಜಾಂಜಿ ಗೋಪಾಲಕೃಷ್ಣ ಭಟ್ ಕಾನಕಜೆ ವಂದಿಸಿದರು.

0 Comments