ಮುಳ್ಳೇರಿಯ: ಅಡೂರು ಸಮೀಪದ ಸಂಜೆಕಡವಿನಲ್ಲಿ ಗುಡ್ಡ ಕುಸಿದು ಮನೆಯಂಗಳದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ದಾರುಣ ಸಾವನ್ನಪ್ಪಿದ್ದು, ಇನ್ನೊರ್ವನ ಸ್ಥಿತಿ ಗಂಭೀರವಾಗಿರುವುದಾಗಿ ವರದಿಯಾಗಿದೆ.
ಶನಿವಾರ (ಇಂದು) ಸಂಜೆ ಈ ಘಟನೆ ಸಂಭವಿಸಿದೆ. ಅಬೂಬಕ್ಕರ್ ಎಂಬುವವರ ಮಕ್ಕಳಾದ ಮುನ್ಸೀರ್ (10) ಮತ್ತು ಮುಜಮ್ಮಿಲ್ (14) ಮೃತಪಟ್ಟವರು.ಇನ್ನೋರ್ವ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗಷ್ಟೇ ಗೃಹಪ್ರವೇಶ ನಡೆದಿದ್ದ ಮನೆಯ ಸಮೀಪ ಮೂರೂ ಮಕ್ಕಳು ಆಟವಾಡುತ್ತಿದ್ದಾಗ ಭಾರೀ ಪ್ರಮಾಣದಲ್ಲಿ ಮಣ್ಣಿನ ದಿಣ್ಣೆ ಕುಸಿದು ಬಿದ್ದಿದ್ದು ಮಕ್ಕಳು ಅದರೊಳಗೆ ಸಿಲುಕಿಕೊಂಡಿದ್ದರು. ಆದೂರು ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.





0 Comments