ಅಡೂರು : ಕುಂಬಳೆ ಸೀಮೆಯ ಪ್ರಸಿದ್ಧ ದೇವಸ್ಥಾನವಾದ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಇದರ ಮುಂಭಾಗಿಲಿನ ಚಿತ್ರಣ ವನ್ನು ತೆಗೆದು ಎಸ್ ಎಸ್ ಎಫ್ ಪಳ್ಳಂಗೋಡು ಸೆಕ್ಟರ್ ನ ಕಾರ್ಯಕ್ರಮವೊಂದರ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ವಿಚಿತ್ರ ರೂಪದಲ್ಲಿ ಚಿತ್ರಿಸಿ ಹಂಚಲಾಗಿತ್ತು. ಈ ವಿಷಯವು ಹಿಂದೂ ಸಮಾಜಕ್ಕೆ ನೋವು ಕೊಟ್ಟಿದ್ದು ಇದರ ವಿರುದ್ದವಾಗಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಅಡೂರು ಪ್ರತಿಭಟನೆಗೆ ಕರೆ ಕೊಟ್ಟು ಪಂಜಿನ ಮೆರವಣಿಗೆ ನಡೆಸಲಾಯಿತು ಕಾರ್ಯಕ್ರಮದಲ್ಲಿ ಮಾತೃ ಶಕ್ತಿ ಜಿಲ್ಲಾ ಸಂಯೋಜಕಿ ಸಧಿ ಕೊಡವತ್ , ಹಿಂದೂ ಜಾಗರಣ ಮಂಗಳೂರು ಸಹ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ , ವಿಶ್ವ ಹಿಂದೂ ಪರಿಷತ್ ಕಣ್ಣೂರ್ ವಿಭಾಗ ಸಂಚಾಲಕ ಸಂಕಪ್ಪ ಭಂಡಾರಿ, ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶಿವರಾಯ ಜಿ, ಮುಳ್ಳೇರಿಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಅಭಿಷೇಕ್ ಸರಳಾಯ, ಮುಳ್ಳೇರಿಯ ಪ್ರಖಂಡ ಭಜರಂಗದಳ ಸಂಯೋಜಕ್ ಭರತ್ ಜಿ ಅಡೂರು, ವಿಶ್ವಹಿಂದೂ ಪರಿಷತ್ ಅಡೂರ್ ಘಟಕ ಅಧ್ಯಕ್ಷ ಸತ್ಯನಾರಾಯಣ ಭಟ್, ಗೌರವ ಅಧ್ಯಕ್ಷ ಅಶೋಕ್ ಸರಳಾಯ ಹಾಗೂ ನೂರಾರು ಕಾರ್ಯ ಕರ್ತರು ಭಾಗವಹಿಸಿದ್ದರು.
ಮುಂದೆ ಇಂತಹ ಕ್ಷೇತ್ರ ವಿರೂಪ ಪ್ರಕರಣಗಳು ಮುಂದುವರಿದರೆ ತಕ್ಕ ಉತ್ತರ ನೀಡಲು ಮುಂದಾಗಿರುವುದಾಗಿ ಸಭೆ ಅಭಿಪ್ರಾಯಪಟ್ಟಿದೆ.

0 Comments