Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬದಿಯಡ್ಕದಲ್ಲಿ ಬೈಕಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಕಟ್ಟತ್ತಡ್ಕದ ಯುವಕನ ಬಂಧನ


ಬದಿಯಡ್ಕ : ಮಾದಕ ವಸ್ತು ಸಾಗಾಟ ಮತ್ತು ಮಾರಾಟದ ವಿರುದ್ಧ ಪೋಲಿಸ್ ಇಲಾಖೆ ಆಪರೇಶನ್ ತೂಫನ್ ಕಾರ್ಯಚರಣೆಯನ್ನು ತೀವ್ರಗೊಳಿಸಿದ್ದು  ಬದಿಯಡ್ಕ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ  ಸಹಿತ ಯುವಕನೋರ್ವನನ್ನು ಬಂಧಿಸಲಾಗಿದೆ. ಕಟ್ಟತಡ್ಕ ಎಕೆಜಿ ನಗರದ ಮೊಹಮ್ಮದ್ ಹನೀಫ (36) ಬಂಧಿತ ಆರೋಪಿ. ಬದಿಯಡ್ಕದ ಬೋಳುಕಟ್ಟೆಯಲ್ಲಿ ಇಂದು ಮುಂಜಾನೆ ವಾಹನಗಳನ್ನು ತಪಾಸಣೆ ನಡೆಸುವ ವೇಳೆ ಆರೋಪಿ ಚಲಾಯಿಸುತ್ತಿದ್ದ  ಬೈಕ್ ತಪಾಸಣೆ ನಡೆಸಿದಾಗ ಅದರಲ್ಲಿ 30 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಕಾರ್ಯಾಚರಣೆಯಲ್ಲಿ ಸ್ಟೇಷನ್ ಹೌಸ್ ಆಫೀಸರ್ ಅನೂಪ್ ಕೃಷ್ಣ, ಎಸ್ ಐ ರೂಪೇಶ್, ಎ ಎಸ್ ಐ ಸಜೀವನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಅನೀಶ್, ವಿಜಿಲ್, ಜಿಲ್ಲಾ ಪೊಲೀಸ್ ಸ್ಕ್ವಾಡ್ ನ ಸಿಜಿನ್ ಕುಮಾರ್, ರೆಜೀಶ್, ಅನೀಶ್, ಭಕ್ತಶೆಲ್ವನ್ ಮೊದಲಾದವರಿದ್ದರು.

Post a Comment

0 Comments


ಜಾಹೀರಾತು

Responsive Advertisement