Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಲೆಯಾಳಂ ಚಿತ್ರರಂಗದ ಹಾಸ್ಯ ನಟ ಸಲೀಂ ಕುಮಾರ್ ಇನ್ನಿಲ್ಲ


 ಕೊಚ್ಚಿ: ಮಲೆಯಾಳಂ ಚಿತ್ರರಂಗದ ಹಾಸ್ಯ ನಟ ಸಲೀಂ ಕುಮಾರ್ (57) ನಿಧನರಾದರು.  ಎರ್ನಾಕುಲಂನ ಅಮೃತಾ ಆಸ್ಪತ್ರೆಯಲ್ಲಿ ಜೂನ್6  ಶನಿವಾರ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ. ಅವರು ಈ ಹಿಂದೆ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ಲಿವರ್ ಕಸಿ ಕೂಡ ಮಾಡಲಾಗಿತ್ತು. ಇಂದು ಬೆಳಗ್ಗೆ ಅನಾರೋಗ್ಯ ಕಾಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ರಾತ್ರಿ 10.43ಕ್ಕೆ ಸಾವು ದೃಢಪಡಿಸಲಾಗಿತ್ತು. ಮೃತರು. ಪತ್ನಿ ಸುನಿತಾ, ನಟ ಚಂದು ಮತ್ತು  ಅರೋಮಲ್ ಮಕ್ಕಳು.  ಮಿಮಿಕ್ರಿ ಲೋಕದಿಂದ ಚಿತ್ರರಂಗಕ್ಕೆ ಕಾಲಿಟ್ಟ ಸಲೀಂ ಕುಮಾರ್ ಮಲೆಯಾಳಿಗಳನ್ನು ನಗುನಗುತ್ತಾ ಯೋಚಿಸುವಂತೆ ಮಾಡಿದ ಹಾಸ್ಯ ನಟ.ಲಾಲ್ ಜೋಸ್ ನಿರ್ದೇಶನದ 'ಅಚ್ಚನುರಂಗತ ವೀಡು' ಚಿತ್ರದ ಪ್ರಮುಖ ಪಾತ್ರಕ್ಕಾಗಿ ಸಲೀಂ ಕುಮಾರ್ ಕೇರಳ ಸರ್ಕಾರದ ಎರಡನೇ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅವರು 2010 ರಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಮತ್ತು 2010 ರಲ್ಲಿ ಅದಾಮಿನ್ ಮಗನ್ ಅಬು ಇದರ ಅಭಿನಯಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ಮೂರು ದಶಕಗಳ ಕಾಲದ ತಮ್ಮ ಸಿನಿಮಾ ಜೀವನದಲ್ಲಿ 320ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ತುಂಬಿದ ಸಲೀಂ ಕುಮಾರ್ ಅವರು ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.

Post a Comment

0 Comments


ಜಾಹೀರಾತು

Responsive Advertisement