ಕಾಸರಗೋಡು : ಕೆಎಸ್‌ಆರ್‌ಟಿಸಿ ಡಿಪೋದಿಂದ ನಿವೃತ್ತರಾಗುತ್ತಿರುವ ಕಂಡಕ್ಟರ್‌ಗಳಾದ ಎ. ವಿಶ್ವನಾಥ್ ಮತ್ತು ಸಿ.ಎಚ್. ನಾರಾಯಣ ನಾಯಕ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪ್ಲಸ್ ಟು ಪಾಸಾದ ಯೂನಿಯನ್ ಸದಸ್ಯರ ಮಕ್ಕಳಿಗೆ ಅಭಿನಂದನೆ ನಡೆಯಿತು. ಕೆಪಿಸಿಸಿ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಸಮಾರಂಭವನ್ನು ಉದ್ಘಾಟಿಸಿದರು. ಘಟಕದ ಅಧ್ಯಕ್ಷ ವಿ. ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎ.ಎಸ್.ಟಿ. ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಬಿಜು ಜಾನ್, ಐಎನ್‌ಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎಂ.ವಿ. ಪದ್ಮನಾಭನ್, ಜಿಲ್ಲಾಧ್ಯಕ್ಷ ಜಲೀಲ್ ಮಲ್ಲ, ಜಿಲ್ಲಾ ಕಾರ್ಯದರ್ಶಿ ಎನ್. ಸಂತೋಷ್ ಕುಮಾರ್, ಕಾಞಂಗಾಡ್ ಘಟಕದ ಅಧ್ಯಕ್ಷ ಎಸ್. ಪವಿತ್ರನ್, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಪಿ. ಸುಧೀರ್, ಅಜಯನ್ ಕುರ್ಮಾ, ಪಿ. ಶ್ರೀನಿವಾಸ್ ಮತ್ತು ಸಿ. ಮಧು ಮೊದಲಾದವರು ಮಾತನಾಡಿದರು.

0 Comments