Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅನಂತಪುರ ಕೈಗಾರಿಕಾ ಕೇಂದ್ರಕ್ಕೆ ಸೇವ್ ಅನಂತಪುರ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

 

ಕುಂಬಳೆ: ಅನಂತಪುರ ಕೈಗಾರಿಕಾ ವಲಯದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು ಇಂದು ಬೆಳಗ್ಗೆ ಸೇವ್ ಅನಂತಪುರ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಕೈಗಾರಿಕಾ ಪ್ರಾಂಗಣದಲ್ಲಿರುವ ಕೋಳಿ ಮತ್ತು ಎಣ್ಣೆ ಕಾರ್ಖಾನೆಗಳಿಂದ ಹೊರಹೊಮ್ಮುತ್ತಿರುವ ದುರ್ವಾಸನೆ ಮತ್ತು ಅವುಗಳಿಂದ ಹರಿಯುವ ಕೊಳಚೆ ನೀರು ಅನಂತಪುರ ಸುತ್ತಮುತ್ತಲಿನ ಕುಡಿ ನೀರಿನ ಬಾವಿಗಳಲ್ಲಿ ಕಲುಷಿತ ನೀರಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ, ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ನಾಯ್ಕಾಪಿನಿಂದ ಮೆರವಣಿಗೆಯ ಮೂಲಕ ಆಗಮಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.ಶಾಸಕ ಎ.ಕೆ.ಎಂ. ಅಶ್ರಫ್  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಶೆರಿಫ್ ಟಿ, ಸಂಚಾಲಕ ಸುನಿಲ್ ಅನಂತಪುರ, ಸಿಎಚ್. ಅಶ್ರಫ್ ಎ.ಕೆ.,ಪುತ್ತಿಗೆ ಪಂಚಾಯತ್ ಅಧ್ಯಕ್ಷೆ ಫಿಧಾ, ವೈ. ಉಪಾಧ್ಯಕ್ಷ ಎ.ಕೆ. ಮುಹಮ್ಮದ್ ಕುಂಞಿ,  ವಿವಿಧ ಪಕ್ಷ ನೇತಾರರಾದ ಎ.ಕೆ. ಆರಿಫ್, ಅಶ್ರಫ್ ಕಾರ್ಲಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್, ಪಂಚಾಯತ್ ಸದಸ್ಯರಾದ ಶಕಿನಾ ಮತ್ತು ಸತೀಶ್ ಭಂಡಾರಿ ಮುಂತಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.  ಕಾರ್ಖಾನೆಗಳಿಂದ ವಾಯು ಮತ್ತು ಜಲ ಮಾಲಿನ್ಯದ ವಿರುದ್ಧ ದೀರ್ಘಕಾಲದ ಪ್ರತಿಭಟನೆ ಮುಂದುವರೆದಿದೆ.

Post a Comment

0 Comments


ಜಾಹೀರಾತು

Responsive Advertisement